ಟ್ವಿಟರ್ ಸಮೀಕ್ಷೆ: ಈ ನಾಲ್ವರಲ್ಲಿ 'ಮೋಸ್ಟ್ ಹ್ಯಾಂಡ್ಸಮ್ ಸಿಎಂ' ಯಾರು ಗೊತ್ತಾ?
ಟ್ವಿಟರ್ ಸಮೀಕ್ಷೆಯೊಂದು ನಡೆದಿದ್ದು, ಅದರಲ್ಲಿ ಭಾರತದ ಅತ್ಯಂತ ಸುಂದರ ಮುಖ್ಯಮಂತ್ರಿ ಯಾರೆಂಬುದನ್ನು ಆಯ್ಕೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಬರೋಬ್ಬರಿ 23 ಸಾವಿರ ಮಂದಿ ಭಾಗವಹಿಸಿ ಆಯ್ಕೆ ಮಾಡಿದ್ದಾರೆ.
Published: 06th February 2023 10:55 AM | Last Updated: 06th February 2023 06:42 PM | A+A A-

ಪ್ರಮೋದ್ ಸಾವಂತ್ - ಪುಷ್ಕರ್ ಸಿಂಗ್ ಧಾಮಿ - ಜಗನ್ ಮೋಹನ್ ರೆಡ್ಡಿ - ಭಗವಂತ್ ಮಾನ್
ಡೆಹರಾಡೂನ್: ಟ್ವಿಟರ್ ಸಮೀಕ್ಷೆಯಲ್ಲಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಭಾರತದ ಅತ್ಯಂತ ಸುಂದರ ಮುಖ್ಯಮಂತ್ರಿ ಎಂದು ಹೆಸರಿಸಿದ್ದಾರೆ.
ಪಂಜಾಬ್‌ನ ಭಗವಂತ್ ಮಾನ್, ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ, ಗೋವಾದ ಪ್ರಮೋದ್ ಸಾವಂತ್ ಮತ್ತು ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ನಡುವೆ ಮತದಾನ ನಡೆದಿತ್ತು. ಇದರಲ್ಲಿ ಧಾಮಿ ಶೇ 38 ಮತಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸಾವಂತ್ ಶೇ 32ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಜಗನ್ ಮೋಹನ್ ರೆಡ್ಡಿ ಮೂರನೇ ಮತ್ತು ಭಗವಂತ್ ಮಾನ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಟ್ವಿಟರ್ ಸಮೀಕ್ಷೆಯಲ್ಲಿ ಸುಮಾರು 20 ಸಾವಿರ ಜನರು ಭಾಗವಹಿಸಿ ನಾಲ್ಕು ಹೆಸರುಗಳನ್ನು ಸೂಚಿಸಿದರು ಮತ್ತು ಆಯ್ಕೆ ಮಾಡಿದರು. ನಂತರ 23 ಸಾವಿರಕ್ಕೂ ಹೆಚ್ಚು ಜನರು ಮತ ಚಲಾಯಿಸಿದರು. ಧಾಮಿಯನ್ನು ಆಯ್ಕೆ ಮಾಡುವ ಮೂಲಕ 'ಅತ್ಯಂತ ಸುಂದರ ಸಿಎಂ' ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಸಂದೀಪ್ ಚಮೋಲಿ, ಸೌಂದರ್ಯವು ಪ್ರಕೃತಿಯ ಕೊಡುಗೆಯಾಗಿದ್ದು, ‘ಹ್ಯಾಂಡ್ಸಮ್ ಮುಖ್ಯಮಂತ್ರಿ’ ಎಂಬ ಬಿರುದು ಪಡೆದಿರುವ ಪುಷ್ಕರ್ ಸಿಂಗ್ ಧಾಮಿ ಅಭಿನಂದನೆಗೆ ಅರ್ಹರು ಎಂದಿದ್ದಾರೆ.