ಭಾರತ ಮೂಲದ ಅಮೆರಿಕನ್ ಬಾಲಕಿಗೆ 2ನೇ ಬಾರಿ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ!

ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಸತತ ಎರಡನೇ ವರ್ಷ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ
ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಸತತ ಎರಡನೇ ವರ್ಷ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಯುಎಸ್ ಮೂಲದ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ ಸಂಸ್ಥೆಯು 76 ದೇಶಗಳ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ  “ವಿಶ್ವದ ಬುದ್ಧಿವಂತ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ನತಾಶಾ ಸ್ಥಾನ ಪಡೆದುಕೊಂಡಿದ್ದಾಳೆ.

13 ವರ್ಷದ ನತಾಶಾ ನ್ಯೂಜೆರ್ಸಿಯ ಫ್ಲಾರೆನ್ಸ್ ಎಂ ಗೌಡಿನೀರ್ ಮಿಡಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಳೆ. ಗ್ರೇಡ್ 5 ವಿದ್ಯಾರ್ಥಿಯಾಗಿದ್ದಾಗ 2021 ರಲ್ಲಿ ಆಕೆ ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಪರೀಕ್ಷೆಯನ್ನು ಬರೆದಿದ್ದಳು. ಆಕೆ ಎಲ್ಲಾ ಅಭ್ಯರ್ಥಿಗಳ ಪೈಕಿ ಅತ್ಯಧಿಕ ಶ್ರೇಣಿ ಗಳಿಸಿದ್ದಾಳೆ.

ಈ ವರ್ಷ, ಎಸ್‌ಎಟಿ, ಎಸಿಟಿ, ಶಾಲೆ ಮತ್ತು ಕಾಲೇಜು ಸಾಮರ್ಥ್ಯ ಪರೀಕ್ಷೆ ಅಥವಾ ಸಿಟಿವೈ ಟ್ಯಾಲೆಂಟ್ ಸರ್ಚ್‌ನ ಭಾಗವಾಗಿ ತೆಗೆದುಕೊಂಡ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆಗಾಗಿ ನತಾಶಾ ಅವರನ್ನು ಗೌರವಿಸಲಾಯಿತು ಎಂದು ವಿಶ್ವವಿದ್ಯಾಲಯವು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನತಾಶಾ ಪೆರಿಯನಾಯಗಂ ಅವರ ಪೋಷಕರು ಚೆನ್ನೈ ಮೂಲದವರಾಗಿದ್ದಾರೆ. ನತಾಶಾ ಬಿಡುವಿನ ಸಮಯದಲ್ಲಿ ಡೂಡ್ಲಿಂಗ್ ಮತ್ತು ಜೆಆರ್'ಆರ್ ಟೋಲ್ಕಿನ್ ಅವರ ಕಾದಂಬರಿಗಳನ್ನು ಓದಲು ಇಷ್ಟಪಡುತ್ತಾಳೆಂದು ನತಾಶಾ ಅವರ ಪೋಷಕರು ಹೇಳಿದ್ದಾರೆ.

"ಇದು ಕೇವಲ ಒಂದು ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿಗಳ ಯಶಸ್ಸಿನ ಗುರುತಿಸುವಿಕೆ ಅಲ್ಲ, ಅವರ ಅನ್ವೇಷಣೆ ಮತ್ತು ಕಲಿಕೆಯ ಮೇಲಿನ ಅವರ ಪ್ರೀತಿ ಮತ್ತು ಅವರು ತಮ್ಮ ಜೀವನದಲ್ಲಿ ಸಂಗ್ರಹಿಸಿದ ಎಲ್ಲಾ ಜ್ಞಾನಕ್ಕೆ ನೀಡುವ ಗೌರವವಾಗಿದೆ ಎಂದು ಜಾನ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (ಸಿಬಿವೈ)ನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ ಆಮಿ ಶೆಲ್ಟನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com