ನಬಾ ದಾಸ್ ಹತ್ಯೆ ಪ್ರಕರಣ: ಸಚಿವರನ್ನು ಹತ್ಯೆ ಮಾಡಲು 3 ತಿಂಗಳಿನಿಂದ ಯೋಜನೆ ರೂಪಿಸಿದ್ದ ಎಎಸ್‌ಐ ಗೋಪಾಲ್
ಕ್ರೈಂ ಬ್ರಾಂಚ್ (ಸಿಬಿ) ಗೋಪಾಲ್ ಅವರ ಪೊಲೀಸ್ ಕಸ್ಟಡಿ ಅವಧಿಯ ವಿಚಾರಣೆಯನ್ನು ಮುಂದುವರಿಸುತ್ತಿದ್ದಂತೆ ಆಘಾತಕಾರಿ ಸಂಗತಿಗಳು ಹೊರಬಿದ್ದಿದ್ದು, ಸಚಿವ ನಬಾ ಕಿಸೋರ್ ದಾಸ್ ಹತ್ಯೆಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗೋಪಾಲ್ ಕೃಷ್ಣ ದಾಸ್ ಮೂರು ತಿಂಗಳಿನಿಂದ ಯೋಜನೆ ರೂಪಿಸಿದ್ದರು ಎಂದು ವರದಿಯಾಗಿದೆ.
Published: 07th February 2023 11:24 AM | Last Updated: 07th February 2023 11:24 AM | A+A A-

ಎಎಸ್ಐ ಗೋಪಾಲ್ (ಎಡ) ಅವರಿಂದ ಹತ್ಯೆಗೊಳಗಾದ ಒಡಿಶಾ ಆರೋಗ್ಯ ಸಚಿವರು (ಬಲ)
ಭುವನೇಶ್ವರ: ಕ್ರೈಂ ಬ್ರಾಂಚ್ (ಸಿಬಿ) ಗೋಪಾಲ್ ಅವರ ಪೊಲೀಸ್ ಕಸ್ಟಡಿ ಅವಧಿಯ ವಿಚಾರಣೆಯನ್ನು ಮುಂದುವರಿಸುತ್ತಿದ್ದಂತೆ ಆಘಾತಕಾರಿ ಸಂಗತಿಗಳು ಹೊರಬಿದ್ದಿದ್ದು, ಸಚಿವ ನಬಾ ಕಿಸೋರ್ ದಾಸ್ ಹತ್ಯೆಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗೋಪಾಲ್ ಕೃಷ್ಣ ದಾಸ್ ಮೂರು ತಿಂಗಳಿನಿಂದ ಯೋಜನೆ ರೂಪಿಸಿದ್ದರು ಎಂದು ವರದಿಯಾಗಿದೆ.
ಕಳೆದ ಎರಡ್ಮೂರು ತಿಂಗಳಿನಿಂದ ಸಚಿವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದಾಗಿ ಗೋಪಾಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇದನ್ನು ಟಿಎನ್‌ಐಇಗೆ ಖಚಿತಪಡಿಸಿರುವ ಹಿರಿಯ ಅಧಿಕಾರಿಗಳು, ಗೋಪಾಲ್ ತನಿಖಾಧಿಕಾರಿಗಳಿಗೆ ಈ ಹೇಳಿಕೆ ನೀಡಿದ್ದಾರೆ. ಗೋಪಾಲ್ ಅವರು ಯಾರೊಂದಿಗೂ ದ್ವೇಷ ಹೊಂದಿಲ್ಲ ಮತ್ತು ಅವರ ಏಕೈಕ ಗುರಿ ಸಚಿವರು ಆಗಿದ್ದರು. ಪೊಲೀಸ್ ಆಗಿದ್ದರೂ, ಕಾನೂನನ್ನು ಕೈಗೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಅಪರಾಧ ಎಸಗಿದ್ದಕ್ಕಾಗಿ ಯಾವುದೇ ಪಶ್ಚಾತ್ತಾಪವನ್ನು ತೋರಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ತಿಳಿಸಿದ್ದಾರೆ.
ಅಪರಾಧ ಮಾಡುವ ಕನಿಷ್ಠ 24 ಗಂಟೆಗಳ ಮೊದಲು, ಗೋಪಾಲ್ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ನವೆಂಬರ್ 2020 ರಿಂದ ಗಾಂಧಿ ಚೌಕ್ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಸೇವೆಗೆ ನಿಯೋಜಿಸಿದ್ದರಿಂದ ಗೋಪಾಲ್ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡರು. ಮೇಲಾಗಿ, ಅವರು ಈ ಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿದ್ದರು. ತನಿಖಾಧಿಕಾರಿಗಳಿಗೆ ತಾನು ಹೇಳಿದ್ದೆಲ್ಲವನ್ನೂ ಅಪರಾಧ ಮಾಡುವ ಮುನ್ನ ಕೆಲವು ಪೇಪರ್‌ಗಳಲ್ಲಿ ಬರೆದಿದ್ದೇ ಎಂದು ಹೇಳಿರುವ ಅಂಶವೂ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಒಡಿಶಾ ಆರೋಗ್ಯ ಸಚಿವರನ್ನು ಗುಂಡಿಕ್ಕಿ ಕೊಂದ ಪೊಲೀಸ್ ಅಧಿಕಾರಿ ಸೇವೆಯಿಂದ ವಜಾ
ಏರ್‌ಪೋರ್ಟ್ ಪೊಲೀಸ್ ಠಾಣೆಯ ಆವರಣದಲ್ಲಿರುವ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ನಿಂದ ಆರೋಪಿ ಫ್ಲಶ್ ಮಾಡಿದ್ದ 22 ಪೇಪರ್‌ಗಳನ್ನು ಸಿಬಿ ವಶಪಡಿಸಿಕೊಂಡಿದೆ. ನಬಾ ದಾಸ್ ಅವರಿಂದ ಝಾರ್ಸುಗುಡ ಜಿಲ್ಲೆಯ ವಾತಾವರಣ ಕಲುಷಿತಗೊಂಡಿದ್ದು, ಇದಕ್ಕಾಗಿ ಸಚಿವರನ್ನು ಕೊಲ್ಲಲು ಯೋಜನೆ ರೂಪಿಸಿದ್ದಾಗಿ ಗೋಪಾಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ನಬಾ ದಾಸ್ ಅವರು ಇರುವುದರಿಂದಾಗಿ ಪೊಲೀಸರು ಬೆನ್ನುಮೂಳೆಯಿಲ್ಲದವರಾಗಿದ್ದರು ಎಂದು ಅವರು ವಿಚಾರಣೆಯ ಸಮಯದಲ್ಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಈಮಧ್ಯೆ, ತನಿಖೆಯನ್ನು ಪರಿಶೀಲಿಸಲು ಡಿಜಿಪಿ ಸುನೀಲ್ ಕುಮಾರ್ ಬನ್ಸಾಲ್ ಮಂಗಳವಾರ ಝಾರ್ಸುಗುಡಾಕ್ಕೆ ಭೇಟಿ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಗೋಪಾಲ್ ಅವರ ವಿಚಾರಣೆಯ ಸಮಯದಲ್ಲಿ ಡಿಜಿಪಿ ಹಾಜರಾಗುವ ಸಾಧ್ಯತೆಯಿಲ್ಲ. ಆದರೆ, ಸಿಬಿ ತಂಡ ಮತ್ತು ನವದೆಹಲಿಯ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಸಿಎಫ್‌ಎಸ್‌ಎಲ್) ಅಧಿಕಾರಿಗಳೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ.
ಸಿಬಿ ತನಿಖಾಧಿಕಾರಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದರೆ ಆರೋಪಿಗಳು ಗಡಸು ನಿದ್ದೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಗೋಪಾಲ್ ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ದೆ ಮಾಡುತ್ತಿದ್ದಾರೆ. ಅವರ ಆಹಾರ ಕ್ರಮವೂ ಉತ್ತಮವಾಗಿದೆ ಎಂದು ಮೂಲಗಳು ತಿಳಿಸಿವೆ.