ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಐಎಸ್‌ಐ, ನಕ್ಸಲೀಯರಿಂದ ಬೆದರಿಕೆ
ಫೆಬ್ರುವರಿ 10 ರಂದು ಭಾಗಲ್ಪುರಕ್ಕೆ ಭೇಟಿ ನೀಡುವ ಮುನ್ನ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಐಎಸ್ಐ, ಉಗ್ರರು ಮತ್ತು ಮೂಲಭೂತವಾದಿಗಳಿಂದ ಬೆದರಿಕೆಗಳು ಬಂದಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.
Published: 08th February 2023 11:06 AM | Last Updated: 08th February 2023 03:25 PM | A+A A-

ಮೋಹನ್ ಭಾಗವತ್
ಭಾಗಲ್ಪುರ: ಫೆಬ್ರುವರಿ 10 ರಂದು ಭಾಗಲ್ಪುರಕ್ಕೆ ಭೇಟಿ ನೀಡುವ ಮುನ್ನ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಐಎಸ್ಐ, ಉಗ್ರರು ಮತ್ತು ಮೂಲಭೂತವಾದಿಗಳಿಂದ ಬೆದರಿಕೆಗಳು ಬಂದಿವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾಡಳಿತದಿಂದ ಜಿಲ್ಲೆಯ ಪೊಲೀಸರನ್ನು ಅಲರ್ಟ್ ಮಾಡಲಾಗಿದೆ. ಭಾಗವತ್ ಅವರ ಭೇಟಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಎಸ್‌ಎಸ್‌ಪಿ ಆನಂದ್ ಕುಮಾರ್ ಮತ್ತು ಉಪವಿಭಾಗಾಧಿಕಾರಿ ಧನಂಜಯ್ ಕುಮಾರ್ ಅವರು ಅಲರ್ಟ್ ಆಗಿದ್ದು, ಮಹಾಸಭಾದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಅದೇ ಸಮಯದಲ್ಲಿ, ಮೋಹನ್ ಭಾಗವತ್ ಅವರು ಭೇಟಿ ನೀಡಲಿರುವ ಮಹರ್ಷಿಯ ಗುಹೆಯನ್ನು ಸಹ ಎಸ್ಎಸ್‌ಪಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣರ ಅವಹೇಳನ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು
ನಾವು ಅಲರ್ಟ್ ಆಗಿದ್ದೇವೆ, ಎಸ್‌ಎಸ್‌ಪಿ ಕೂಡ ಪರಿಶೀಲನೆ ನಡೆಸಿದ್ದಾರೆ. ಭದ್ರತೆಗೆ ಸಂಬಂಧಿಸಿದಂತೆ, ವಿವಿಧ ಸ್ಥಳಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಪಡೆಗಳ ನಿಯೋಜನೆ ಇರುತ್ತದೆ. ಸಮಿತಿಯೊಂದಿಗೆ ನಿರಂತರ ಸಂವಾದ ನಡೆಯುತ್ತಿದೆ. ಸಿಸಿಟಿವಿ ಕಣ್ಗಾವಲು ಇರುತ್ತದೆ, ಜೊತೆಗೆ ಪೊಲೀಸ್ ಪಡೆಗಳನ್ನು ಸಿವಿಲ್ ಡ್ರೆಸ್‌ನಲ್ಲಿ ನಿಯೋಜಿಸಲಾಗುವುದು ಎಂದು ಎಸ್‌ಡಿಎಂ ಎಎನ್‌ಐಗೆ ತಿಳಿಸಿದೆ.
ಅವರು Z+ ರಕ್ಷಣೆ ಹೊಂದಿದ್ದಾರೆ. ಕಾರ್ಯಕ್ರಮದ ಸ್ಥಳ ಮತ್ತು ಸಂಚಾರಕ್ಕೆ ಸಂಬಂಧಿಸಿದಂತೆ ಭದ್ರತಾ ವ್ಯವಸ್ಥೆಗಳಿಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಎಸ್‌ಎಸ್‌ಪಿ ಎಎನ್‌ಐಗೆ ತಿಳಿಸಿದರು.
ಫೆಬ್ರುವರಿ 10 ರಂದು ಮಹರ್ಷಿಯ ಕುಪ್ಪಘಾಟ್ ಆಶ್ರಮದಲ್ಲಿ ಸದ್ಗುರುಗಳ ನಿವಾಸವನ್ನು ಉದ್ಘಾಟಿಸಲಾಗುವುದು ಮತ್ತು ಪರಮಹಂಸ ಮಹಾರಾಜರ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಲೋಕಾರ್ಪಣೆ ಮಾಡಲಾಗುವುದು.
ಇದನ್ನೂ ಓದಿ: ದೇವರ ಪಾಲಿಗೆ ಎಲ್ಲರೂ ಒಂದೇ, ಜಾತಿಗಳನ್ನು ಸೃಷ್ಟಿಸಿರುವುದು ಪುರೋಹಿತರೇ ಹೊರತು ದೇವರಲ್ಲ: ಮೋಹನ್ ಭಾಗವತ್
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭಾಗವತ್ ಅವರ ಕಾರ್ಯಕ್ರಮ ಮೂರು ಗಂಟೆ 45 ನಿಮಿಷಗಳ ಕಾಲ ನಡೆಯಲಿದೆ. ಅವರು ಮಹರ್ಷಿ ಮೇಹಿಯ ತಪಸ್ಸಿನ ಪ್ರಸಿದ್ಧ ಗುಹೆಗೂ ಭೇಟಿ ನೀಡುತ್ತಾರೆ. ನಂತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದರ ನಂತರ, ಅವರು ನೌಗಾಚಿಯಾಗೆ ತೆರಳುತ್ತಾರೆ.