ಆಂಧ್ರಪ್ರದೇಶ: ಖಾದ್ಯ ತೈಲ ಕಾರ್ಖಾನೆಯಲ್ಲಿ ಆಯಿಲ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಮಂದಿ ಸಾವು

ಕಾಕಿನಾಡಕ್ಕೆ ಸಮೀಪದ ಹಳ್ಳಿಯೊಂದರ ಖಾದ್ಯ ತೈಲ ಕಾರ್ಖಾನೆಯ ಏಳು ಕಾರ್ಮಿಕರು ಗುರುವಾರ ತೈಲ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಳಿದಾಗ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಕಿನಾಡ: ಇಲ್ಲಿಗೆ ಸಮೀಪದ ಹಳ್ಳಿಯೊಂದರ ಖಾದ್ಯ ತೈಲ ಕಾರ್ಖಾನೆಯ ಏಳು ಕಾರ್ಮಿಕರು ಗುರುವಾರ ತೈಲ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಳಿದಾಗ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿ ರಾಗಂಪೇಟೆಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಮೃತರು ಪೆದ್ದಾಪುರಂ ಮಂಡಲದ ಪಾಡೇರು ಮತ್ತು ಪುಲಿಮೇರು ಮೂಲದವರು.

ಓರ್ವ ವ್ಯಕ್ತಿ ಮೊದಲು ಟ್ಯಾಂಕ್ ಅನ್ನು ಪ್ರವೇಶಿಸಿದ್ದಾರೆ ಮತ್ತು ಅವರು ಮೇಲಕ್ಕೆ ಬರದ ಇನ್ನುಳಿದವರು ಕೂಡ ಟ್ಯಾಂಕ್ ಒಳಗೆ ಇಳಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾರ್ಖಾನೆ ಆಡಳಿತವು ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸಿಲ್ಲ ಎಂದು ಸಂತ್ರಸ್ತರ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com