ಜಮ್ಮು ಮತ್ತು ಕಾಶ್ಮೀರದ 12 ಜಿಲ್ಲೆಗಳಲ್ಲಿ ಹಿಮಪಾತದ ಎಚ್ಚರಿಕೆ

ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುರುವಾರ ಮುಂದಿನ 24 ಗಂಟೆಗಳ ಕಾಲ ಅನಂತನಾಗ್, ಬಾರಾಮುಲ್ಲಾ, ಗಂದರ್ಬಾಲ್, ದೋಡಾ, ರಜೌರಿ ಮತ್ತು ಪೂಂಚ್ ಸೇರಿದಂತೆ 12 ಜಿಲ್ಲೆಗಳಿಗೆ ಹಿಮಪಾತದ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುರುವಾರ ಮುಂದಿನ 24 ಗಂಟೆಗಳ ಕಾಲ ಅನಂತನಾಗ್, ಬಾರಾಮುಲ್ಲಾ, ಗಂದರ್ಬಾಲ್, ದೋಡಾ, ರಜೌರಿ ಮತ್ತು ಪೂಂಚ್ ಸೇರಿದಂತೆ 12 ಜಿಲ್ಲೆಗಳಿಗೆ ಹಿಮಪಾತದ ಎಚ್ಚರಿಕೆ ನೀಡಿದೆ.

ಅನಂತನಾಗ್, ಬಂಡೀಪೋರ್, ಬಾರಾಮುಲ್ಲಾ, ಗಂದರ್‌ಬಾಲ್, ಕುಪ್ವಾರಾ, ಕುಲ್ಗಾಂ, ದೋಡಾ, ಕಿಶ್ತ್‌ವಾರ್ ಮತ್ತು ಪೂಂಚ್ ಜಿಲ್ಲೆಗಳಲ್ಲಿ 2,000 ರಿಂದ 2,500 ಮೀಟರ್‌ಗಿಂತ ಹೆಚ್ಚು, 'ಮಧ್ಯಮ ಅಪಾಯ' ಮಟ್ಟದ ಹಿಮಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ರಿಯಾಸಿ, ರಜೌರಿ ಮತ್ತು ರಾಂಬನ್ ಜಿಲ್ಲೆಗಳಲ್ಲಿ 2,000 ರಿಂದ 2,500 ಮೀಟರ್‌ಗಿಂತ ಹೆಚ್ಚು 'ಕಡಿಮೆ ಅಪಾಯ' ಮಟ್ಟದ ಹಿಮಪಾತ ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

ಈ ಪ್ರದೇಶಗಳಲ್ಲಿ ವಾಸಿಸುವ ಜನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಸುರಕ್ಷತೆಯ ದೃಷ್ಟಿಯಿಂದ ಹಿಮಕುಸಿತ ಪೀಡಿತ ಪ್ರದೇಶಗಳಿಗೆ ಹೋಗುದಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com