ಜನರ ಮಾತನ್ನು ಆಲಿಸುವುದು ಮುಖ್ಯ, ಬುಲ್ಡೋಜರ್ ಅಡಿಯಲ್ಲಿ ಅವರ ಹಕ್ಕುಗಳನ್ನು ಪುಡಿಮಾಡುವುದಲ್ಲ: ಪ್ರಿಯಾಂಕಾ ಗಾಂಧಿ
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಂತಿ ಮತ್ತು ವಿಶ್ವಾಸಕ್ಕಾಗಿ ಸಾಮಾನ್ಯ ಜನರ ಮಾತುಗಳನ್ನು ಕೇಳುವುದು ಅಗತ್ಯವಾಗಿದೆ ಮತ್ತು ಅವರ ಹಕ್ಕುಗಳನ್ನು ಬುಲ್ಡೋಜರ್ ಅಡಿಯಲ್ಲಿ ಪುಡಿಮಾಡಬಾರದು ಎಂದು ಹೇಳಿದ್ದಾರೆ.
Published: 13th February 2023 01:27 PM | Last Updated: 13th February 2023 06:32 PM | A+A A-

ಪ್ರಿಯಾಂಕಾ ಗಾಂಧಿ ವಾದ್ರಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಂತಿ ಮತ್ತು ವಿಶ್ವಾಸಕ್ಕಾಗಿ ಸಾಮಾನ್ಯ ಜನರ ಮಾತುಗಳನ್ನು ಕೇಳುವುದು ಅಗತ್ಯವಾಗಿದೆ ಮತ್ತು ಅವರ ಹಕ್ಕುಗಳನ್ನು ಬುಲ್ಡೋಜರ್ ಅಡಿಯಲ್ಲಿ ಪುಡಿಮಾಡಬಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಯಂತಹ ಪ್ರಮುಖ ರಾಜಕೀಯ ಪಕ್ಷಗಳು ಈ ಅಭಿಯಾನದ ವಿರುದ್ಧ ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ ಮತ್ತು ತಕ್ಷಣವೇ ಅದನ್ನು ನಿಲ್ಲಿಸುವಂತೆ ಒತ್ತಾಯಿಸಿವೆ.
ಕಂದಾಯ ಇಲಾಖೆಯ ಕಮಿಷನರ್ ಕಾರ್ಯದರ್ಶಿ ವಿಜಯ್ ಕುಮಾರ್ ಬಿಂಧುರಿ ಅವರು 100 ರಷ್ಟು ಅತಿಕ್ರಮಣಗಳನ್ನು ತೆಗೆದುಹಾಕಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಆದೇಶದ ನಂತರ, ನಂತರ ಅಧಿಕಾರಿಗಳು ಜನವರಿ 7ರಿಂದ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಕನಲ್ (ಒಂದು ಕನಲ್= 605 ಚದರ ಗಜಗಳು) ಜಮ್ಮು ಮತ್ತು ಕಾಶ್ಮೀರದಾದ್ಯಂತ ತೆರವುಗೊಳಿಸಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕಾ, ಲಡಾಖ್‌ನಲ್ಲಿ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸುವಂತೆ ಒತ್ತಾಯಿಸುತ್ತಿರುವ ಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಕಾಶ್ಮೀರದಲ್ಲಿ ಸಾಮಾನ್ಯ ಜನರು ಏನು ಹೇಳುತ್ತಿದ್ದಾರೆಂಬುದನ್ನು ಗಮನಿಸದೆ ಅವರ ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಉದ್ಯೋಗ, ಪ್ರೀತಿ ಬದಲು ಬಿಜೆಪಿಯ ಬುಲ್ಡೋಜರ್- ರಾಹುಲ್ ಗಾಂಧಿ
ದೇಶವು ಜನರಿಂದ ನಿರ್ಮಿತವಾಗಿದೆ. ಶಾಂತಿ ಮತ್ತು ವಿಶ್ವಾಸಕ್ಕಾಗಿ, ಸಾಮಾನ್ಯ ಜನರ ಮಾತನ್ನು ಆಲಿಸುವುದು ಅಗತ್ಯವಾಗಿದೆ ಮತ್ತು ಅವರ ಹಕ್ಕುಗಳನ್ನು ಬುಲ್ಡೋಜರ್ ಅಡಿಯಲ್ಲಿ ಪುಡಿ ಮಾಡಬೇಡಿ ಎಂದು ಹೇಳಿದ್ದಾರೆ.
ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ವಿವಿಧ ಮಾಧ್ಯಮ ವರದಿಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಟ್ಯಾಗ್ ಮಾಡಿದ್ದಾರೆ.