ಅದಾನಿ ವಿಚಾರವಾಗಿ ವಿಪಕ್ಷಗಳ ಗದ್ದಲ; ಮಾರ್ಚ್ 13ರವರೆಗೆ ರಾಜ್ಯಸಭೆ ಕಲಾಪ ಮುಂದೂಡಿಕೆ

ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ಹಿಂಪಡೆಯಲು ಮತ್ತು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸದನಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಾರ್ಚ್ 13ಕ್ಕೆ ಮುಂದೂಡಲಾಯಿತು.
ರಾಜ್ಯಸಭೆ
ರಾಜ್ಯಸಭೆ

ನವದೆಹಲಿ: ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ಹಿಂಪಡೆಯಲು ಮತ್ತು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸದನಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಾರ್ಚ್ 13ಕ್ಕೆ ಮುಂದೂಡಲಾಯಿತು.

ಸದನ ಆರಂಭವಾಗುತ್ತಲೇ ಗದ್ದಲದಿಂದಾಗಿ ಬೆಳಗ್ಗೆ ಅಲ್ಪಾವಧಿಗೆ ಮುಂದೂಡಲ್ಪಟ್ಟ ಸದನವು, ವಿರಾಮದ ನಂತರ ಮಾರ್ಚ್ 13 ರಂದು ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದೆ.

ಪಟ್ಟಿ ಮಾಡಲಾದ ಪೇಪರ್ಸ್‌ಗಳನ್ನು ಸದನದ ಮೇಜಿನ ಮೇಲೆ ಇಟ್ಟ ಕೂಡಲೇ, ಪ್ರತಿಪಕ್ಷದ ಸಂಸದರು ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಸಭಾಪತಿ ಜಗದೀಪ್ ಧನಖರ್ ಖರ್ಗೆ ಅವರಿಗೆ ಮಾತನಾಡಲು ಅನುಮತಿ ನೀಡಿದಾಗ, ಖಜಾನೆ ಪೀಠದಿಂದ ಹಲವಾರು ಸದಸ್ಯರು ಘೋಷಣೆಗಳನ್ನು ಎತ್ತಲು ಪ್ರಾರಂಭಿಸಿದರು. ಆದರೆ, ಖರ್ಗೆಯವರ ಮಾತುಗಳನ್ನು ಸಭಾಪತಿಯವರು ದಾಖಲೆಯಿಂದ ತೆಗೆದುಹಾಕಿದರು.

ಪ್ರತಿಪಕ್ಷದ ಸಂಸದರು ಕೂಡ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಅವರಲ್ಲಿ ಹಲವರು ಸದನದ ಬಾವಿಗೆ ನುಗ್ಗಿದರು.
ಸದನದ ಕಲಾಪಗಳ ಅನಧಿಕೃತ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ಸದನದಿಂದ ಅಮಾನತುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com