
ಚೀತಾ
ನವದೆಹಲಿ: ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಭಾರತಕ್ಕೆ ಆಗಮಿಸುತ್ತಿವೆ.
ಫೆ.18 ರಂದು ಚೀತಾಗಳು ಭಾರತಕ್ಕೆ ಬರಲಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
ಚೀತಾ ಮರುಪರಿಚಯಿಸುವ ಯೋಜನೆಯಡಿಯಲ್ಲಿ ಪ್ರಧಾನಿ ಮೋದಿ ಅವರು 2022 ರ ಸೆಪ್ಟೆಂಬರ್ 17 ರಂದು ತಮ್ಮ 72 ನೇ ಜನ್ಮದಿನದಂದು ನಮೀಬಿಯಾದಿಂದ ತಂದ 8 ಚೀತಾಗಳನ್ನು ಮಧ್ಯಪ್ರದೇಶದ ಕುನು ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದರು
ಇದನ್ನೂ ಓದಿ: ಕ್ವಾರಂಟೈನ್ ಮುಗಿಸಿದ ಮೂರನೇ ಚೀತಾ, ಕುನೊ ಪಾರ್ಕ್ ನ ದೊಡ್ಡ ಆವರಣಕ್ಕೆ ಬಿಡುಗಡೆ
ಆಗ ತಂದುಬಿಟ್ಟಿದ್ದ ಚೀತಾಗಳು ಕುನು ಉದ್ಯಾನವನದಲ್ಲಿ ಪ್ರತಿ 3-4 ದಿನಗಳಿಗೊಮ್ಮೆ ಬೇಟೆಯಾಡುತ್ತಿದ್ದು, ಆರೋಗ್ಯವಾಗಿವೆ. ಆದರೆ ಈ ಪೈಕಿ ಒಂದು ಚೀತಾಗೆ ಕ್ರಿಯಾಟಿನ್ ಮಟ್ಟ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಚಿಕಿತ್ಸೆ ಬಳಿಕ ಆ ಚೀತಾ ಸುಧಾರಿಸಿಕೊಂಡಿದೆ.