ಮಹಾ ವಿವಾದ: ಜ್ಯೋತಿರ್ಲಿಂಗ ಹೈಜಾಕ್ ಮಾಡಿದ ಅಸ್ಸಾಂ!

ಅಸ್ಸಾಂ ಸರ್ಕಾರ ನೀಡಿರುವ ಜ್ಯೋತಿರ್ಲಿಂಗದ ಕುರಿತ ಜಾಹಿರಾತು ಈಗ ಮಹಾ ವಿವಾದಕ್ಕೆ ಗುರಿಯಾಗಿದೆ. 
ಜ್ಯೋತಿರ್ಲಿಂಗದ ಕುರಿತ ಜಾಹಿರಾತು
ಜ್ಯೋತಿರ್ಲಿಂಗದ ಕುರಿತ ಜಾಹಿರಾತು

ಮುಂಬೈ: ಅಸ್ಸಾಂ ಸರ್ಕಾರ ನೀಡಿರುವ ಜ್ಯೋತಿರ್ಲಿಂಗದ ಕುರಿತ ಜಾಹಿರಾತು ಈಗ ಮಹಾ ವಿವಾದಕ್ಕೆ ಗುರಿಯಾಗಿದೆ. 

ಭೀಮಾಶಂಕರ್ ಜ್ಯೋತಿರ್ಲಿಂಗವನ್ನು ಅಸ್ಸಾಂ ನ ಪಮೋಹಿಗೆ ಹೈಜಾಕ್ ಮಾಡಿರುವುದಕ್ಕೆ ಮಹಾರಾಷ್ಟ್ರದ ವಿಪಕ್ಷ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜಾಹಿರಾತಿನಲ್ಲಿ ನೀಡಲಾಗಿರುವ ಶಿವಲಿಂಗ ಅಥವಾ ಧಾರ್ಮಿಕ ಗುರುತು ಈಗಾಗಲೇ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾಶಂಕರ್ ನಲ್ಲಿದೆ. ಅಸ್ಸಾಂ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಜಾಹಿರಾತಿನಲ್ಲಿ ಜ್ಯೋತಿರ್ಲಿಂಗ ತನ್ನ ರಾಜ್ಯದಲ್ಲಿದೆ ಎಂದು ಹೇಳಿತ್ತು. ಡಾಕಿನಿ ಹಿಲ್ಸ್ ನ  ತಪ್ಪಲಲ್ಲಿ ಈ ಜ್ಯೋತಿರ್ಲಿಂಗವಿದ್ದು ಗುವಾಹಟಿ ವಿಮಾನ ನಿಲ್ದಾಣದಿಂದ 18 ಕಿ.ಮೀ ದೂರದಲ್ಲಿದೆ ಎಂದು ಹೇಳಿತ್ತು. 

ಫೆ.18 ರಂದು ಮಹಾ ಶಿವರಾತ್ರಿ ಇರುವ ಹಿನ್ನೆಲೆಯಲ್ಲಿ ಈ ಜಾಹಿರಾತು ಪ್ರಕಟಗೊಂಡಿತ್ತು. ಎನ್ ಸಿಪಿ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 12 ಜ್ಯೋತಿರ್ಲಿಂಗಗಳ ಪೈಕಿ ಒಂದು ಪುಣೆಯ ಭೀಮಾಶಂಕರದಲ್ಲಿದೆ ಎಂದು ಹೇಳಿದ್ದಾರೆ. 

ಸಿಎಂ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆ, ಪದ್ಧತಿಗಳನ್ನು ರಕ್ಷಿಸಬೇಕು. ಅಸ್ಸಾಂ ಸಿಎಂಗೆ ಅವರು ವಾಸ್ತವಿಕ ಇತಿಹಾಸವನ್ನು ತಿಳಿಸಬೇಕು. ಹಿಮಂತ ಬಿಸ್ವ ಶರ್ಮಾ ಅವರು ಹೇಳುತ್ತಿರುವುದು ಐತಿಹಾಸಿಕವಾಗಿ ಸುಳ್ಳಾಗಿದ್ದು, ಆಧಾರ ರಹಿತವಾಗಿದೆ ಹಾನಿಕರ ಅಂಶವಾಗಿದೆ, ಮಹಾರಾಷ್ಟ್ರದ ಪುಣೆಯಲ್ಲಿರುವ ಭೀಮಾಶಂಕರ್ ಜ್ಯೋತಿರ್ಲಿಂಗ 6 ನೇ ಜ್ಯೋತಿರ್ಲಿಂಗವಾಗಿದೆ ಎಂದು ಸುಳೆ ತಿಳಿಸಿದ್ದಾರೆ.
 
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಬಿಜೆಪಿಗೆ ಮಹಾರಾಷ್ಟ್ರಕ್ಕೆ ಏನನ್ನೂ ಉಳಿಸುವುದು ಬೇಕಿಲ್ಲ. ಒಂದರ ನಂತರ ಮತ್ತೊಂದನ್ನು ಕಸಿದುಕೊಳ್ಳುತ್ತಿದ್ದಾರೆ ಇಲ್ಲವೇ ಹೈಜಾಕ್ ಮಾಡುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ಗುಜರಾತ್ ನಂತಹ ರಾಜ್ಯಗಳು ಮಹಾರಾಷ್ಟ್ರದಿಂದ ಹೂಡಿಕೆಯನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿದ್ದು ಈಗ ಧಾರ್ಮಿಕ ಕೇಂದ್ರಗಳನ್ನೂ ಹೈಜಾಕ್ ಮಾಡುವ ಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮಹಾ ಶಿವರಾತ್ರಿಯ ಅಂಗವಾಗಿ ಡಾಕಿನಿ ಪ್ರಬಾತ್, ಕಾಮರೂಪ, 6 ನೇ ಜ್ಯೋತಿರ್ಲಿಂಗವಿರುವ ಪ್ರದೇಶಕ್ಕೆ ಸ್ವಾಗತ ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಹ್ವಾನಿಸಿದ್ದ ಜಾಹಿರಾತು ಪ್ರಕಟಗೊಂಡಿತ್ತು. ಪುಣೆ  ಬಳಿಯ ಭೀಮಾಶಂಕರ್ ಎಂಬ ಹೆಸರಿನ ಬಳಿಗೆ ಡಾಕಿನಿ ಬಳಿಯ ಭೀಮಾಶಂಕರ್ ಎಂದು ನಮೂದಿಸಲಾಗಿದ್ದು, ಅಸ್ಸಾಂ ಸಿಎಂ ಫೋಟೋವನ್ನೂ ಹಾಕಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com