ಫೆ. 22ಕ್ಕೆ ದೆಹಲಿ ಮೇಯರ್ ಚುನಾವಣೆ

ದೆಹಲಿ ಮೇಯರ್ ಚುನಾವಣೆಯನ್ನು ಫೆಬ್ರವರಿ 22 ರಂದು ನಡೆಸಲು ಮಹಾನಗರ ಪಾಲಿಕೆ ಸಭೆ ಕರೆಯಲು ಲೆಫ್ಟಿನೆಂಟ್ ಗೌವರ್ನರ್ ವಿಕೆ ಸಕ್ಸೇನಾ ಅನುಮತಿ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.
ದೆಹಲಿ ಮಹಾನಗರ ಪಾಲಿಕೆ ಸಾಂದರ್ಭಿಕ ಚಿತ್ರ
ದೆಹಲಿ ಮಹಾನಗರ ಪಾಲಿಕೆ ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿ ಮೇಯರ್ ಚುನಾವಣೆಯನ್ನು ಫೆಬ್ರವರಿ 22 ರಂದು ನಡೆಸಲು ಮಹಾನಗರ ಪಾಲಿಕೆ ಸಭೆ ಕರೆಯಲು ಲೆಫ್ಟಿನೆಂಟ್ ಗೌವರ್ನರ್ ವಿಕೆ ಸಕ್ಸೇನಾ ಅನುಮತಿ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಅದೇ ದಿನದಿಂದು ಮೇಯರ್ ಚುನಾವಣೆ ನಡೆಸಲು ಅರವಿಂದ್ ಕೇಜ್ರಿವಾಲ್ ಶಿಫಾರಸು ಮಾಡಿದ ಕೆಲ ಗಂಟೆಗಳ ನಂತರ ಲೆಫ್ಟಿನೆಂಟ್ ಗವರ್ನರ್ ಸಮ್ಮತಿ ಸೂಚಿಸಿದ್ದಾರೆ. 

ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಯ ಸದಸ್ಯರ ಚುನಾವಣೆಯ ದಿನಾಂಕ  ನಿಗದಿಪಡಿಸಲು ದೆಹಲಿಯ ಮಹಾನಗರ ಪಾಲಿಕೆಯ ಮೊದಲ ಸಭೆಯನ್ನು ಕರೆಯಲು 24 ಗಂಟೆಗಳ ಒಳಗೆ ನೋಟಿಸ್ ಜಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿತ್ತು.  ಫೆಬ್ರರಿ 22 ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಶಿಫಾರಸು ಮಾಡಲಾಗಿದೆ ಎಂದು ಕೇಜ್ರಿವಾಲ್ ಬೆಳಗ್ಗೆ ಟ್ವೀಟ್ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com