ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ: ಲಾರಿ-ಕಾರು ಢಿಕ್ಕಿ, 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವು
ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಲಾರಿ ಮತ್ತು ಕಾರಿನ ನಡುವೆ ಢಿಕ್ಕಿಯಾಗಿ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ.
Published: 19th February 2023 03:51 PM | Last Updated: 19th February 2023 03:51 PM | A+A A-

ಸಾಂದರ್ಭಿಕ ಚಿತ್ರ
ಗುಂಟೂರು: ಆಂಧ್ರ ಪ್ರದಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಲಾರಿ ಮತ್ತು ಕಾರಿನ ನಡುವೆ ಢಿಕ್ಕಿಯಾಗಿ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲಾದಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದ್ದು, ಕೋರಿಶಪಡು ಮಂಡಲದ ಮೇದರಮೆಟ್ಲ ಬೈಪಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ 9 ವರ್ಷದ ಬಾಲಕಿ ಸೇರಿ 5 ಮಂದಿ ಸಾವಿಗೀಡಾಗಿದ್ದಾರೆ. ಮೃತರನ್ನು ಎಸ್.ಎಸ್.ಸಮಂದವರವಿ ವಹೀದಾ (35), ಅವರ ಒಂಬತ್ತು ವರ್ಷದ ಮಗಳು ಆಯೇಷಾ, ಕುಟುಂಬ ಸ್ನೇಹಿತರು ಎಂದು ಗುರುತಿಸಲಾಗಿದೆ.
Andhra Pradesh | At least 5 people including a 9-year-old girl killed after a car collided with a lorry last night in the Bapatla district. Car was going from Medarametla to Guntur. A case has been registered, and further investigation is underway: CI Roshaiah, Andhra Pradesh
— ANI (@ANI) February 19, 2023
ಇದನ್ನೂ ಓದಿ: ಗುಜರಾತ್ ನಲ್ಲಿ ಭೀಕರ ರಸ್ತೆ ಅಪಘಾತ: ಟ್ರಕ್‌ಗೆ ಜೀಪ್ ಡಿಕ್ಕಿ, 7 ಮಂದಿ ದಾರುಣ ಸಾವು; ಚಾಲಕ ಪರಾರಿ
ಟಿಎಸ್ 07 ಜಿಡಿ 3249 ಸಂಖ್ಯೆಯ ಕಾರು ಒಂಗೋಲ್ ಕಡೆಯಿಂದ ಗುಂಟೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಮೇದರಮೆಟ್ಲ ದಕ್ಷಿಣ ಬೈಪಾಸ್ ಬಳಿ ಬರುವಷ್ಟರಲ್ಲಿ ಗಾಡಿಯ ಟೈರ್ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಪಲ್ಟಿಯಾಗಿ ಇನ್ನೊಂದು ಬದಿಗೆ ಹಾರಿದೆ. ಇದೇ ವೇಳೆ ಗುಂಟೂರಿನಿಂದ ಒಂಗೋಲ್ ಕಡೆಗೆ ಹೋಗುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸಹಿತ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಕಾರು - ಲಾರಿ ಮುಖಾಮುಖಿ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು
ವಿಚಾರ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.