ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭೂಕುಸಿತ; ಐದು ಮನೆಗಳಿಗೆ ಹಾನಿ

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ದೂರದ ಗುಡ್ಡಗಾಡು ಗ್ರಾಮದಲ್ಲಿ ಭೂಕುಸಿತದಿಂದಾಗಿ ಕನಿಷ್ಠ ಐದು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಬನ್: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ದೂರದ ಗುಡ್ಡಗಾಡು ಗ್ರಾಮದಲ್ಲಿ ಭೂಕುಸಿತದಿಂದಾಗಿ ಕನಿಷ್ಠ ಐದು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಂಬನ್ ಜಿಲ್ಲಾ ಕೇಂದ್ರದಿಂದ 45 ಕಿಮೀ ದೂರದಲ್ಲಿರುವ ಗೂಲ್ ಉಪವಿಭಾಗದ ಸಂಗಲ್ದನ್‌ನ ದುಕ್ಸರ್ ದಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹದಿನೈದು ದಿನಗಳ ಹಿಂದೆ ದೋಡಾ ಜಿಲ್ಲೆಯ ನಾಯ್ ಬಸ್ತಿ ಗ್ರಾಮದಲ್ಲಿ ಭೂಕುಸಿತದಿಂದಾಗಿ 19 ಮನೆಗಳು, ಮಸೀದಿ ಮತ್ತು ಬಾಲಕಿಯರ ಧಾರ್ಮಿಕ ಶಾಲೆ ಬಿರುಕು ಬಿಟ್ಟಿತ್ತು.

"ದುಕ್ಸರ್ ದಳದಲ್ಲಿ ಭೂಕುಸಿತದಿಂದಾಗಿ ಒಟ್ಟು ಐದು ಮನೆಗಳು ಹಾನಿಗೊಳಗಾಗಿವೆ ಮತ್ತು ಅವು ವಾಸಯೋಗ್ಯವಾಗಿಲ್ಲ. ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ತಕ್ಷಣದ ಪರಿಹಾರವಾಗಿ ಟೆಂಟ್‌ಗಳು, ಪಡಿತರ, ಪಾತ್ರೆಗಳು ಮತ್ತು ಹೊದಿಕೆಗಳನ್ನು ಒದಗಿಸಲಾಗಿದೆ" ಎಂದು ಗೂಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ತನ್ವೀರ್-ಉಲ್-ಮಜೀದ್ ವಾನಿ ಅವರು ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com