ಅಸ್ಸಾಂ: ಪತಿ ಮತ್ತು ಅತ್ತೆಯನ್ನು ಕೊಂದು ದೇಹದ ಭಾಗಗಳನ್ನು ಫ್ರೀಜರ್‌ನಲ್ಲಿ ಶೇಖರಿಸಿಟ್ಟಿದ್ದ ಮಹಿಳೆ
ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹದ ಭಾಗಗಳನ್ನು ಕೆಲವು ದಿನಗಳವರೆಗೆ ಫ್ರೀಜರ್‌ನಲ್ಲಿ ಸಂಗ್ರಹಿಸಿ ನಂತರ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Published: 20th February 2023 12:14 PM | Last Updated: 20th February 2023 12:14 PM | A+A A-

ಸಾಂದರ್ಭಿಕ ಚಿತ್ರ
ಗುಹಾವಟಿ: ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹದ ಭಾಗಗಳನ್ನು ಕೆಲವು ದಿನಗಳವರೆಗೆ ಫ್ರೀಜರ್‌ನಲ್ಲಿ ಸಂಗ್ರಹಿಸಿ ನಂತರ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏಳು ತಿಂಗಳ ಹಿಂದೆ ನಗರದ ನೂನ್ಮತಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ಆರೋಪಿ ತಪ್ಪೊಪ್ಪಿಕೊಂಡ ನಂತರ ಸೋಮವಾರವಷ್ಟೇ ಈ ಘಟನೆ ಬೆಳಕಿಗೆ ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ, ಆರೋಪಿ ಬಂದನಾ ಕಲಿತಾ, ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು 2022ರ ಆಗಸ್ಟ್ 17 ರಂದು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
'ಕೊಲೆ ನಂತರ, ಬಂದನಾ ಅವರು ಸಂತ್ರಸ್ತರ ದೇಹದ ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ ಮನೆಯಿಂದ ಹೊರಟುಹೋಗಿದ್ದಾರೆ. ಅದಾದ ನಾಲ್ಕು ದಿನಗಳ ನಂತರ ಆಗಸ್ಟ್ 21 ರಂದು ಮನೆಗೆ ಹಿಂದಿರುಗಿದ್ದಾರೆ ಮತ್ತು ಗುವಾಹಟಿಯಿಂದ ಕನಿಷ್ಠ 200 ಕಿಮೀ ದೂರದಲ್ಲಿರುವ ಮೇಘಾಲಯದ ದವ್ಕಿ ನದಿಗೆ ದೇಹದ ತುಂಡುಗಳನ್ನು ಎಸೆದಿದ್ದಾರೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೇಮಿಗಳ ದಿನದಂದೆ ದೆಹಲಿಯ ಡಾಬಾದ ಫ್ರಿಜ್ ನಲ್ಲಿ ಯುವತಿಯ ಮೃತದೇಹ ಪತ್ತೆ!
ಪೊಲೀಸ್ ಮೂಲಗಳ ಪ್ರಕಾರ, ಕಲಿತಾ ಅವರ ನೆರೆಹೊರೆಯವರು ಆಕೆಯ ಮನೆಯ ಟೆರೇಸ್‌ನಲ್ಲಿ ಪೀಠೋಪಕರಣಗಳನ್ನು ಸುಡುವುದನ್ನು ನೋಡಿರುವುದಾಗಿ ಖಚಿತಪಡಿಸಿದ್ದಾರೆ.
ಕಲಿತಾ ಅವರ ಇಬ್ಬರು ಸ್ನೇಹಿತರಾದ ಅರುಪ್ ದೇಕಾ ಮತ್ತು ಧಂಜಿತ್ ದೇಕಾ ಅವರನ್ನು ಕೊಲೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬಂಧಿಸಲಾಗಿದೆ.
ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಬೇಕಿದೆ.