ಬಡ್ತಿಗಾಗಿ 6 ವರ್ಷಗಳಿಂದ ಕಾಯುತ್ತಿರುವ ಶೇ.70 ರಷ್ಟು ಜೆಎನ್ ಯು ಶಿಕ್ಷಕರು!

ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಒಕ್ಕೂಟ ಬಡ್ತಿ ನೀಡುತ್ತಿರುವುದರಲ್ಲಿನ ವಿಳಂಬವನ್ನು ಬಹಿರಂಗಪಡಿಸಿದ್ದಾರೆ.
ಜೆಎನ್ ಯು
ಜೆಎನ್ ಯು

ನವದೆಹಲಿ: ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಒಕ್ಕೂಟ ಬಡ್ತಿ ನೀಡುತ್ತಿರುವುದರಲ್ಲಿನ ವಿಳಂಬವನ್ನು ಬಹಿರಂಗಪಡಿಸಿದ್ದಾರೆ.

ಬಡ್ತಿ ವಿಳಂಬಕ್ಕೆ ಸಂಬಂಧಿಸಿದಂತೆ ವಿಸ್ತೃತ ಅಂಕಿ-ಅಂಶಗಳನ್ನು ಶಿಕ್ಷಕರ ಒಕ್ಕೂಟ ಹಂಚಿಕೊಂಡಿದ್ದು, ಮಾರ್ಚ್ 2022 ರ ವರೆಗೆ ಶೇ.73 ರಷ್ಟು ಸಹಾಯಕ ಹಾಗೂ ಶೇ.80 ರಷ್ಟು ಸಹ ಪ್ರಾಧ್ಯಾಪಕರು ಬಡ್ತಿಗಾಗಿ 5-6 ವರ್ಷಗಳಿಂದ ಕಾಯುತ್ತಿರುವುದಾಗಿ ಜೆಎನ್ ಯು ಟಿಎ ಸದಸ್ಯರೊಬ್ಬರು ಹೇಳಿದ್ದಾರೆ

ಈ ವಿಳಂಬದಿಂದಾಗಿ 2021-22 ರ ಅವಧಿಯಲ್ಲಿ ಒಟ್ಟು 378 ಪಿಹೆಚ್ ಡಿ ಸೀಟ್ ಗಳು ವ್ಯರ್ಥವಾಗಿದೆ. ಸಹಾಯಕ ಪ್ರಾಧ್ಯಾಪಕರಿಗೆ ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕೆ ನಿರ್ದಿಷ್ಟ ಮಿತಿ ಇರುತ್ತದೆ. ಸಹಾಯಕ ಪ್ರಾಧ್ಯಾಯಪಕರು 6 ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದಾದರೆ, ಸಹ ಪ್ರಧ್ಯಾಪಕರು 8 ವಿದ್ಯಾರ್ಥಿಗಳನ್ನು ಹಾಗೂ ಪ್ರಾಧ್ಯಾಪಕರು 10 ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದಾಗಿದೆ.

ಶಿಕ್ಷಕರ ಒಕ್ಕೂಟ ಹಿಂದಿನ ಸೇವಾ ಎಣಿಕೆ (ಪಿಎಸ್ ಸಿ) ವಿಷಯವನ್ನೂ ಪ್ರಸ್ತಾಪಿಸಿದ್ದು, ಹೊಸ ಯುಜಿಸಿ ಮಾರ್ಗಸೂಚಿಗಳು ಶಿಕ್ಷಕರಿಗೆ ಸಮಸ್ಯೆಗಳನ್ನು ಹೆಚ್ಚಿಸಿದೆ. ಯುಜಿಸಿಯಿಂದ ಪ್ರತಿಕ್ರಿಯೆ ಬಂದ ಆಧಾರದಲ್ಲಿ ವಿವಿಗೆ ಶಿಕ್ಷಣ ಸಚಿವಾಲಯದ ಹೊಸ ಪತ್ರದಲ್ಲಿ, ಯುಜಿಸಿ ನಿಯಂತ್ರಣ 2000 ರಲ್ಲಿ ಹಿಂದಿನ ಸೇವೆಯನ್ನು ಉಲ್ಲೇಖಿಸದ ಕಾರಣ 2000-2010 ವರೆಗೆ ಯಾವುದೇ ಹಿಂದಿನ ಸೇವೆಯನ್ನು ಎಣಿಕೆ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.

2000 ನಂತರದ ಹಲವು ವಿವಿಗಳಿಗೆ ಕಳಿಸಲಾಗಿರುವ ಪತ್ರಗಳಲ್ಲಿ ಹಾಗೂ ಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದ ಹಲವು ಪ್ರತಿಕ್ರಿಯೆಗಳಲ್ಲಿ ಯುಜಿಸಿ ಬಡ್ತಿ ಹಾಗೂ ಹಿಂದಿನ ಸೇವಾ ಎಣಿಕೆ 1998 ರ ರೆಗ್ಯುಲೇಷನ್ಸ್ ಪ್ರಕಾರವೇ ಮುಂದುವರೆಯಲಿದೆ ಎಂದು ಬರೆದಿರುವುದಾಗಿ ಜೆಎನ್ ಯುಟಿಎ ಅಧ್ಯಕ್ಷರಾದ ಬಿಷ್ಣುಪ್ರಿಯಾ ದತ್ ಹೇಳಿದ್ದಾರೆ.

ಬಡ್ತಿಗಾಗಿ ಕಾಯುತ್ತಿರುವ ಎಲ್ಲಾ ಬೋಧಕವರ್ಗದ ಸದಸ್ಯರಿಗೂ 2018 ರ ಯುನಿಸಿ ನಿಯಮಾವಳಿಗಳ ಪ್ರಕಾರವೇ ಅರ್ಜಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮನವೊಲಿಸಲಾಗಿದೆ. ಪುನರಾವಲೋಕನ ಪರಿಣಾಮದೊಂದಿಗೆ ಜಾರಿಯಾದಲ್ಲಿ,  ಹಿರಿತನ ಮತ್ತು ಆರ್ಥಿಕ ಪ್ರಯೋಜನಗಳ ವಿಷಯಗಳಲ್ಲಿ ಪ್ರಮುಖ ನಷ್ಟ ಎದುರಿಸಬೇಕಾಗುತ್ತದೆ ಎಂದು ಬಿಷ್ಣುಪ್ರಿಯಾ ದತ್ ವಿವರಿಸಿದ್ದಾರೆ. 

ಒಟ್ಟು 206 ಬಡ್ತಿಗಳು ಜಗದೇಶ ಕುಮಾರ್ ಆಡಳಿತದಲ್ಲಿ ಬಾಕಿ ಇದ್ದರೆ, ಈ ಹಿಂದಿನ ಆಡಳಿತದಲ್ಲಿ 70 ಬಡ್ತಿಗಳು ಬಾಕಿ ಇತ್ತು ಎಂದು ಬಿಷ್ಣುಪ್ರಿಯಾ ದತ್ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com