ದೆಹಲಿ ಅಬಕಾರಿ ನೀತಿ ಹಗರಣ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪಿಎಗೆ ಇ.ಡಿ ಸಮನ್ಸ್
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕೆಪಿ ಅವರಿಗೆ ಸಮನ್ಸ್ ನೀಡಿದೆ.
Published: 23rd February 2023 01:40 PM | Last Updated: 23rd February 2023 01:40 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕೆಪಿ ಅವರಿಗೆ ಸಮನ್ಸ್ ನೀಡಿದೆ.
ಫೆಬ್ರುವರಿ 11 ರಂದು ವೈಎಸ್ಆರ್ ಕಾಂಗ್ರೆಸ್ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ ಅವರ ಪುತ್ರ ರಾಘವ್ ಮಾಗುಂಟ ಅವರನ್ನು ಇ.ಡಿ ಬಂಧಿಸಿತ್ತು.
ಮಾಗುಂಟಾ ಅವರಿಗೂ ಮುನ್ನ, ಇ.ಡಿ ಪಂಜಾಬ್ ಮೂಲದ ಉದ್ಯಮಿ ಗೌತಮ್ ಮಲ್ಹೋತ್ರಾ ಮತ್ತು ಎಎಪಿಯ ಸಾಮಾಜಿಕ ಮಾಧ್ಯಮ ಉಸ್ತುವಾರಿ ವಿಜಯ್ ನಾಯರ್ ಅವರ ಸಹಾಯಕ ರಾಜೇಶ್ ಜೋಶಿ ಅವರನ್ನು ಬಂಧಿಸಿತ್ತು.
ಇದಕ್ಕೂ ಮೊದಲು, ಫೆಬ್ರುವರಿ 26 ರಂದು ತನಿಖೆಗೆ ಹಾಜರಾಗುವಂತೆ ಸಿಬಿಐ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮತ್ತೊಂದು ಸಮನ್ಸ್ ಕಳುಹಿಸಿತ್ತು.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಫೆಬ್ರುವರಿ 26 ರಂದು ಸಿಬಿಐ ತನ್ನನ್ನು ವಿಚಾರಣೆಗೆ ಕರೆದಿದೆ- ಮನೀಶ್ ಸಿಸೋಡಿಯಾ
ಸದ್ಯಕ್ಕೆ ಇ.ಡಿ ಎರಡು ಪ್ರಾಸಿಕ್ಯೂಷನ್ ದೂರು, ಆರೋಪಪಟ್ಟಿ ಮತ್ತು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಮೂರನೇ ಆರೋಪಪಟ್ಟಿ (ಎರಡನೇ ಪೂರಕ) ಸಲ್ಲಿಸಲು ಸಜ್ಜಾಗಿದೆ.