ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪತಿ ಡಾ ದೇವಿಸಿಂಗ್ ಆರ್.ಶೇಖಾವತ್ ನಿಧನ, ಅಂತ್ಯಕ್ರಿಯೆ ಇಂದು
ಶಿಕ್ಷಣ ತಜ್ಞ ಮತ್ತು ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
Published: 24th February 2023 01:05 PM | Last Updated: 24th February 2023 02:44 PM | A+A A-

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ - ಡಾ. ದೇವಿಸಿಂಗ್ ಆರ್ ಶೇಖಾವತ್
ಪುಣೆ: ಶಿಕ್ಷಣ ತಜ್ಞ ಮತ್ತು ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಡಾ. ದೇವಿಸಿಂಗ್ ರಾಂಸಿಂಗ್ ಶೇಖಾವತ್ ಶುಕ್ರವಾರ ಬೆಳಿಗ್ಗೆ ಇಲ್ಲಿ ನಿಧನರಾದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
88 ವರ್ಷ ವಯಸ್ಸಿನ ಅವರು ಕೆಇಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಮಾಜಿ ರಾಷ್ಟ್ರಪತಿ ಪತ್ನಿ ಪ್ರತಿಭಾ ಪಾಟೀಲ್, ಮಗ ರಾಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ನಾಯಕಿ ಮತ್ತು ಪುತ್ರಿ ಜ್ಯೋತಿ ರಾಥೋಡ್ ಅವರು ಇದ್ದರು.
ಮೂಲಗಳ ಪ್ರಕಾರ, ಫೆಬ್ರುವರಿ 12 ರಂದು ಪುಣೆಯಲ್ಲಿ ತಮ್ಮ ಮನೆಯ ಹೊರಗೆ ಬೆಳಿಗ್ಗೆ ಹುಲ್ಲುಹಾಸಿನ ಮೇಲೆ ಶೇಖಾವತ್ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರು ಅಧಿಕ ರಕ್ತದೊತ್ತಡ, ಮೂತ್ರಪಿಂಡ ವೈಫಲ್ಯ ಸೇರಿದಂತೆ ಇತರೆ ತೊಡಕುಗಳನ್ನು ಎದುರಿಸಿದರು. ಇದುವೇ ಅವರ ಮರಣಕ್ಕೆ ಕಾರಣವಾಯಿತು.
ಲಭ್ಯವಿರುವ ಮಾಹಿತಿಯ ಪ್ರಕಾರ, ಶೇಖಾವತ್ ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 7 ಗಂಟೆಗೆ ವೈಕುಂಠಧಾಮ್ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎನ್ನಲಾಗಿದೆ.
ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿದ್ದ (2007-2012) ಅವರ ಪತ್ನಿ ಪ್ರತಿಭಾ (89) ತಮ್ಮ ಗಂಡನ ಹಠಾತ್ ನಿಧನದಿಂದಾಗಿ ಆಘಾತಕ್ಕೊಳಗಾಗಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಸಾಂತ್ವನ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಬ್ಬ ಕೃಷಿಕ ಮತ್ತು ಶಿಕ್ಷಣತಜ್ಞರಾಗಿದ್ದ ಶೇಖಾವತ್ ರಾಜಕಾರಣಿಯಾಗಿ ಬದಲಾಗಿದ್ದರು. ಅಮರಾವತಿಯಿಂದ ಬಂದವರು. ಅಲ್ಲಿ ಅವರು ಮೊದಲ ಮೇಯರ್ ಆಗಿ (1991-1992) ಮತ್ತು ಮಹಾರಾಷ್ಟ್ರ ಶಾಸಕರಾಗಿ (1985-1990) ಸೇವೆ ಸಲ್ಲಿಸಿದರು.