ಉತ್ತರ ಪ್ರದೇಶದಲ್ಲಿ 27 ಲಕ್ಷ ರೂಪಾಯಿ ನಕಲಿ ನೋಟು ಜಪ್ತಿ; ಮೂವರ ಬಂಧನ

ಉತ್ತರ ಪ್ರದೇಶದ ಭೋಜಿಪುರ ಪ್ರದೇಶದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ 27 ಲಕ್ಷ ರೂಪಾಯಿಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು(ಎಫ್‌ಐಸಿಎನ್) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರೇಲಿ: ಉತ್ತರ ಪ್ರದೇಶದ ಭೋಜಿಪುರ ಪ್ರದೇಶದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ 27 ಲಕ್ಷ ರೂಪಾಯಿಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು(ಎಫ್‌ಐಸಿಎನ್) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಹರ್ವಾನ್ಸಿ ಸಿಂಗ್ ಅಲಿಯಾಸ್ ಸೋನು, ಗುರ್ನಾಮ್ ಮತ್ತು ಸದ್ದಾಂ ಹುಸೇನ್ ಅವರನ್ನು ಗುರುವಾರ ಭರ್ಪಾರ ಖುಜಾರಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮೂವರ ಬಳಿ 27 ಲಕ್ಷ ರೂಪಾಯಿ ನಕಲಿ ನೋಟುಗಳು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಗೆ ನೇಪಾಳ, ದೆಹಲಿ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ಸಂಪರ್ಕವಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಬರೇಲಿ ಉಪ ಪೊಲೀಸ್ ಮಹಾನಿರೀಕ್ಷಕ ಅಖಿಲೇಶ್ ಚೌರಾಸಿಯಾ ಅವರು ಹೇಳಿದ್ದಾರೆ.

ವಿಶೇಷ ಕಾರ್ಯಪಡೆ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಈ ಮೂವರು ಆರೋಪಿಗಳನ್ನು ಬಂಧಿಸಿದೆ. ಈ ಗ್ಯಾಂಗ್ 1 ಲಕ್ಷ ರೂಪಾಯಿ ನೈಜ ನೋಟುಗಳನ್ನು 3 ಲಕ್ಷ ರೂಪಾಯಿ ನಕಲಿ ನೋಟು ನೀಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com