ಸುಕ್ಮಾದಲ್ಲಿ ಭೀಕರ ನಕ್ಸಲ್ ಎನ್ಕೌಂಟರ್: 3 DRG ಸೈನಿಕರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ

ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಸುಕ್ಮಾದಲ್ಲಿ ನಡೆದ ಭೀಕರ ಎನ್ಕೌಂಟರ್ ನಲ್ಲಿ 3 DRG ಸೈನಿಕರು (District Reserve Guards) ಹುತಾತ್ಮರಾಗಿದ್ದಾರೆ.
ಸುಕ್ಮಾದಲ್ಲಿ ಭೀಕರ ನಕ್ಸಲ್ ಎನ್ಕೌಂಟರ್: 3 DRG ಸೈನಿಕರು ಹುತಾತ್ಮ, ಇಬ್ಬರ ಸ್ಥಿತಿ ಗಂಭೀರ

ಸುಕ್ಮಾ: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದು, ಸುಕ್ಮಾದಲ್ಲಿ ನಡೆದ ಭೀಕರ ಎನ್ಕೌಂಟರ್ ನಲ್ಲಿ 3 DRG ಸೈನಿಕರು (District Reserve Guards) ಹುತಾತ್ಮರಾಗಿದ್ದಾರೆ.

ಛತ್ತೀಸ್‌ಗಢದಲ್ಲಿ ಸುಕ್ಮಾದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿದ್ದು, ಈ ಪೈಕಿ ಮೂವರು DRG ಯೋಧರು ಹುತಾತ್ಮರಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಶನಿವಾರ ಬೆಳಗ್ಗೆ ಜಾಗರಗುಂದ ಸಮೀಪದ ಆಶ್ರಮ ಪಾರಾದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಎರಡೂ ಕಡೆಯಿಂದ ಕ್ಷಿಪ್ರ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಬಾಂಬ್ ಸ್ಫೋಟದ ಸದ್ದು ಕೂಡ ಕೇಳಿಸಿತು. ಘಟನೆಯಲ್ಲಿ ಮೂವರು DRG ಯೋಧರು ಹುತಾತ್ಮರಾಗಿ ಇಬ್ಬರು ಗಾಯಗೊಂಡಿದ್ದಾರೆ.  

ಭದ್ರತಾ ಪಡೆಗಳ ಯೋಧರು ಶೋಧ ಕಾರ್ಯಾಚರಣೆಗೆ ತೆರಳಿದ್ದರು, ಆಗ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎಎಸ್‌ಐ ರಾಮುರಾಮ್ ನಾಗ್, ಸಹಾಯಕ ಕಾನ್‌ಸ್ಟೆಬಲ್ ಕುಂಜಮ್ ಜೋಗ ಮತ್ತು ಕಾನ್‌ಸ್ಟೆಬಲ್ ವನಜಂ ಭೀಮಾ ಅವರು ಹುತಾತ್ಮರಾಗಿದ್ದಾರೆ. ಅಂತೆಯೇ ದಾಳಿಯಲ್ಲಿ ಇಬ್ಬರು ಯೋಧರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಹೊಂಚು ಹಾಕಿ ಹೊಡೆದ ನಕ್ಸಲರು
ಇನ್ನು ಪೊಲೀಸ್ ಮೂಲಗಳ ಪ್ರಕಾರ, ಪ್ರದೇಶ ಪ್ರಾಬಲ್ಯದ ಮೇಲೆ ಹೊಸದಾಗಿ ಸ್ಥಾಪಿಸಲಾದ ಜಾಗರಗುಂದ ಪ್ರದೇಶದ ಕುಂದರ್ ಶಿಬಿರದಿಂದ ಯೋಧರು ಶೋಧ ಕಾರ್ಯಾಚರಣೆಗೆ ತೆರಳಿದ್ದರು. ನಂತರ ಶಿಬಿರದಿಂದ ಎರಡು ಕಿ.ಮೀ ದೂರದ ಆಶ್ರಂಪಾರ ಬಳಿ ಬೆಳಗ್ಗೆ ಎಂಟು ಗಂಟೆಗೆ ನಕ್ಸಲೀಯರು ಹೊಂಚು ಹಾಕಿ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಎನ್‌ಕೌಂಟರ್‌ ನಿಲ್ಲಿಸಲಾಯಿತು ಎಂದು ಸುಕ್ಮಾ ಎಸ್‌ಪಿ ಸುನಿಲ್‌ ಶರ್ಮಾ ತಿಳಿಸಿದ್ದಾರೆ. ಬೆಂಗಾವಲು ಸೇನಾಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಪ್ರದೇಶದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com