ದೆಹಲಿ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಮರುಚುನಾವಣೆಗೆ ಹೈಕೋರ್ಟ್ ತಡೆ

ಫೆಬ್ರವರಿ 27 ರಂದು ನಿಗದಿಯಾಗಿದ್ದ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಆರು ಸದಸ್ಯರ ಸ್ಥಾಯಿ ಸಮಿತಿ ಮರುಚುನಾವಣೆಗೆ ದೆಹಲಿ ಹೈಕೋರ್ಟ್ ಶನಿವಾರ ತಡೆಹಿಡಿದಿದೆ.
ಎಂಸಿಡಿಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಎಎಪಿ, ಬಿಜೆಪಿ ಕೌನ್ಸಿಲರ್ ಗಳು
ಎಂಸಿಡಿಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಎಎಪಿ, ಬಿಜೆಪಿ ಕೌನ್ಸಿಲರ್ ಗಳು

ನವದೆಹಲಿ: ಫೆಬ್ರವರಿ 27 ರಂದು ನಿಗದಿಯಾಗಿದ್ದ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಆರು ಸದಸ್ಯರ ಸ್ಥಾಯಿ ಸಮಿತಿ ಮರುಚುನಾವಣೆಗೆ ದೆಹಲಿ ಹೈಕೋರ್ಟ್ ಶನಿವಾರ ತಡೆಹಿಡಿದಿದೆ.

ಮರು ಚುನಾವಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಶೇಷ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೌರಂಗ್ ಕಾಂತ್ ಅವರು, ಫೆಬ್ರವರಿ 24 ರಂದು ನಡೆದ ಹಿಂದಿನ ಮತದಾನದ ಫಲಿತಾಂಶ ಪ್ರಕಟಿಸದೆ ಚುನಾವಣಾಧಿಕಾರಿಯೂ ಆಗಿರುವ ಮೇಯರ್ ಸೋಮವಾರ ಮರು ಚುನಾವಣೆ ಘೋಷಿಸಿರುವುದು ಮೇಲ್ನೋಟಕ್ಕೆ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಅನೂರ್ಜಿತ ಎಂದು ಘೋಷಿಸಲು ದೆಹಲಿ ಮೇಯರ್‌ಗೆ ಅಧಿಕಾರವಿದೆ ಎಂದು ನಿಯಮಾವಳಿಗಳಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಮರು ಚುನಾವಣೆ ನಡೆಸುವ ಅಧಿಸೂಚನೆಗೆ ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್, ಈ ಸಂಬಂಧ ಚುನಾವಣಾಧಿಕಾರಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com