ಜಾರ್ಖಂಡ್‌ನಲ್ಲಿ ಸ್ಫೋಟಕಗಳೊಂದಿಗೆ 6 ಮಾವೋವಾದಿಗಳ ಬಂಧನ

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸ್ವಯಂ ಘೋಷಿತ ಕಮಾಂಡರ್ ಸೇರಿದಂತೆ ಆರು ಮಾವೋವಾದಿಗಳನ್ನು ಬಂಧಿಸಲಾಗಿದೆ ಮತ್ತು ಅವರ ಬಳಿ ಇದ್ದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಶ್ಚಿಮ ಸಿಂಗ್‌ಭೂಮ್: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಸ್ವಯಂ ಘೋಷಿತ ಕಮಾಂಡರ್ ಸೇರಿದಂತೆ ಆರು ಮಾವೋವಾದಿಗಳನ್ನು ಬಂಧಿಸಲಾಗಿದೆ ಮತ್ತು ಅವರ ಬಳಿ ಇದ್ದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  
ಕೆಲವು ಮಾವೋವಾದಿಗಳು ತಮ್ಮ ಕಮಾಂಡರ್‌ಗೆ ಸ್ಫೋಟಕಗಳನ್ನು ತಲುಪಿಸಲು ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಅವರನ್ನು ಬಂಧಿಸಲು ತಂಡ ರಚಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಅವರು ಹೇಳಿದ್ದಾರೆ.

ಅದರಂತೆ, ನಮ್ಮ ತಂಡ ಬರಿಪೋಖಾರಿ ಗ್ರಾಮದ ರಸ್ತೆಯನ್ನು ಸುತ್ತುವರಿದು ತೀವ್ರ ತಪಾಸಣೆ ನಡೆಸಿತು ಮತ್ತು ಬೋಜ್ ಹೆಂಬ್ರಾಮ್ ಅಲಿಯಾಸ್ ಕಿಶುನ್ ಹೆಂಬ್ರಾಂನನ್ನು ಬಂಧಿಸಿ ಡಿಟೋನೇಟರ್ ಮತ್ತು ಜಿಲೆಟಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಶೇಖರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ಬೋಜ್ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಟೊಂಟೊ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡಿಟೋನೇಟರ್‌ಗಳು ಮತ್ತು ಜಿಲೆಟಿನ್ ಸ್ಟಿಕ್‌ಗಳೊಂದಿಗೆ ಇತರ ಮೂವರು ಮಾವೋವಾದಿಗಳನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಂಧಿತ ಮಾವೋವಾದಿಗಳು ತಾವು ಮಾವೋವಾದಿ ಗುಂಪಿನ ಸಕ್ರಿಯ ಸದಸ್ಯರಾಗಿದ್ದು, ತಮ್ಮ ಕಮಾಂಡರ್‌ನ ಸೂಚನೆ ಮೇರೆಗೆ ಸ್ಫೋಟಕಗಳನ್ನು ಸಾಗಿಸುತ್ತಿದ್ದೆವು ಎಂದು ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ರೆಂಗ್ರಹಟು ಗ್ರಾಮದಲ್ಲಿ ದಾಳಿ ನಡೆಸಿ ಮಾವೋವಾದಿ ಮಿಲಿಟಿಯಾ ಗುಂಪಿನ ಕಮಾಂಡರ್ ದಾಮು ಕೊಡ ಅಲಿಯಾಸ್ ಜುಡು ಕೋಡಾ(35) ಮತ್ತು ಬಿರ್ಸಿಂಗ್ ಅಲಿಯಾಸ್ ಚೋಟಾ ಕೋಡಾ (35)ರನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com