ಕಾಂಗ್ರೆಸ್ ಈಗ ಪೂರ್ವದಿಂದ ಪಶ್ಚಿಮ ಕಡೆಯ ಯಾತ್ರೆಗೆ ಗಮನ-  ಜೈರಾಮ್ ರಮೇಶ್ 

ಭಾರತ್ ಜೋಡೋ ಯಾತ್ರೆಯ ತಪಸ್ಯ ವನ್ನು ಮುಂದಕ್ಕೆ ಕೊಂಡೊಯ್ಯಲು ರಾಹುಲ್ ಗಾಂಧಿ ಕರೆ ನೀಡಿದ ನಂತರ ಕಾಂಗ್ರೆಸ್ ಪಾಸಿಘಾಟ್-ಪೋರಬಂದರ್ ಯಾತ್ರೆಯನ್ನು ಗಮನ ವಹಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.
ಜೈ ರಾಮ್ ರಮೇಶ್
ಜೈ ರಾಮ್ ರಮೇಶ್

ನವದೆಹಲಿ: ಭಾರತ್ ಜೋಡೋ ಯಾತ್ರೆಯ ತಪಸ್ಯ ವನ್ನು ಮುಂದಕ್ಕೆ ಕೊಂಡೊಯ್ಯಲು ರಾಹುಲ್ ಗಾಂಧಿ ಕರೆ ನೀಡಿದ ನಂತರ ಕಾಂಗ್ರೆಸ್ ಪಾಸಿಘಾಟ್-ಪೋರಬಂದರ್ ಯಾತ್ರೆಯನ್ನು ಗಮನ ವಹಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಿಂದ ಈ ವರ್ಷದ ಜನವರಿವರೆಗೆ  ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸುಮಾರು 4,000 ಕಿಮೀ ಕನ್ಯಾಕುಮಾರಿ-ಕಾಶ್ಮೀರ ಪ್ರಯಾಣದ ನಂತರ ಮತ್ತೊಂದು ಯಾತ್ರೆಗೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಶಕ್ತಿ ತುಂಬಿದೆ ಎಂದು ರಮೇಶ್ ಪ್ರತಿಪಾದಿಸಿದ್ದಾರೆ.

 ಪ್ರಾಯಶಃ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಗೆ ಗಮನ ಹರಿಸಲಾಗಿದೆ. ಆದರೆ ಅದರ ಸ್ವರೂಪ ಭಾರತ್ ಜೋಡೋ ಯಾತ್ರೆಗಿಂತ ಸ್ವಲ್ಪ ಭಿನ್ನವಾಗಿರಬಹುದು ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ  ಸಜ್ಜುಗೊಳಿಸಲಾದ ರೀತಿಯ ಮೂಲಸೌಕರ್ಯವನ್ನು ಹೊಂದಿಲ್ಲದಿರಬಹುದು ಮತ್ತು ಕಡಿಮೆ ಯಾತ್ರಿಗಳನ್ನು ಹೊಂದಿರಬಹುದು ಎಂದು ಅವರು ಹೇಳಿದರು. ಈ ಮಾರ್ಗದಲ್ಲಿ ಕಾಡಾನೆಗಳು ಮತ್ತು ನದಿಗಳಿದ್ದು, ಇದು ಯಾತ್ರೆಗಿಂತಲೂ ಹೆಚ್ಚಾಗಿ ಪಾದಯಾತ್ರೆಯಾಗಿರುತ್ತದೆ ಎಂದು ರಮೇಶ್ ಹೇಳಿದರು.

ಕರ್ನಾಟಕದಲ್ಲಿ ಏಪ್ರಿಲ್‌ನಲ್ಲಿ ಚುನಾವಣೆ, ಜೂನ್‌ನಿಂದ ಮಳೆ ಮತ್ತು ನವೆಂಬರ್‌ನಲ್ಲಿ ಮತ್ತೆ ರಾಜ್ಯ ಚುನಾವಣೆಗಳು ಇರುವುದರಿಂದ ಜೂನ್‌ಗಿಂತ ಮೊದಲು ಅಥವಾ ನವೆಂಬರ್‌ಗಿಂತ ಮೊದಲು ಯಾತ್ರೆಯನ್ನು ಕೈಗೊಳ್ಳಬೇಕಾಗಬಹುದು. ಈ ಯಾತ್ರೆಯು ಭಾರತ್ ಜೋಡೋ ಯಾತ್ರೆಗಿಂತ ಕಡಿಮೆ ಅವಧಿಯದ್ದಾಗಿದ್ದು,  ಇದೆಲ್ಲವನ್ನೂ ಮುಂದಿನ ವಾರಗಳಲ್ಲಿ ನಿರ್ಧರಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com