ಸೋನಿಯಾ ಗಾಂಧಿ ನಿವೃತ್ತಿ ಹೊಂದಿಲ್ಲ, ಆದರೆ ಪಕ್ಷಕ್ಕೆ ಮಾರ್ಗದರ್ಶನ ನೀಡಲಿದ್ದಾರೆ: ಅಲ್ಕಾ ಲಾಂಬಾ
ಸೋನಿಯಾ ಗಾಂಧಿ ಅವರ ರಾಜಕೀಯ ಜೀವನದ 'ಇನ್ನಿಂಗ್ಸ್ ಕೊನೆಗೊಂಡಿದೆ' ಎನ್ನುವ ವರದಿಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರೆ ಅಲ್ಕಾ ಲಂಬಾ, ಅವರು ನಿವೃತ್ತಿ ಹೊಂದಿಲ್ಲ. ಆದರೆ, ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.
Published: 26th February 2023 01:12 PM | Last Updated: 26th February 2023 01:16 PM | A+A A-

ಅಲ್ಕಾ ಲಂಬಾ
ರಾಯಪುರ: ಸೋನಿಯಾ ಗಾಂಧಿ ಅವರ ರಾಜಕೀಯ ಜೀವನದ 'ಇನ್ನಿಂಗ್ಸ್ ಕೊನೆಗೊಂಡಿದೆ' ಎನ್ನುವ ವರದಿಗಳ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರೆ ಅಲ್ಕಾ ಲಂಬಾ, ಅವರು ನಿವೃತ್ತಿ ಹೊಂದಿಲ್ಲ. ಆದರೆ, ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಮುಂದುವರಿಸುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ 85ನೇ ಮಹಾಧಿವೇಶನದಲ್ಲಿ ಮಾತನಾಡಿದ ಲಂಬಾ, ಸೋನಿಯಾ ಗಾಂಧಿಯವರೊಂದಿಗೆ ಎರಡು ನಿಮಿಷ ಮಾತನಾಡುವ ಅವಕಾಶ ಸಿಕ್ಕಿತ್ತು. 'ಮೇಡಂ, ನಿನ್ನೆಯ ನಿಮ್ಮ ಹೇಳಿಕೆಯನ್ನು ರಾಜಕೀಯದಿಂದ ನಿವೃತ್ತಿ ಹೊಂದುತ್ತಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ' ಎಂದೆ. ಆದರೆ, ಭವಿಷ್ಯದಲ್ಲಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯುತ್ತೇವೆ ಎಂದು ಸೋನಿಯಾ ಅವರು ಹೇಳಿದ್ದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದರು.
ಸೋನಿಯಾ ಗಾಂಧಿ ಅವರು ರಾಜಕೀಯದಿಂದ ನಿವೃತ್ತಿಯಾಗುತ್ತಿಲ್ಲ ಎಂಬುದನ್ನು ಪ್ರತಿನಿಧಿಗಳಿಗೆ ಮತ್ತು ರಾಷ್ಟ್ರಕ್ಕೆ ತಿಳಿಸಲು ಇದು ಸಕಾಲ ಎಂದು ಹೇಳಿದರು.
'ಡಾ. ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವದ ಜೊತೆಗೆ 2004 ಮತ್ತು 2009 ರಲ್ಲಿನ ನಮ್ಮ ಗೆಲುವುಗಳು ನನಗೆ ವೈಯಕ್ತಿಕ ತೃಪ್ತಿ ನೀಡಿವೆ. ಆದರೆ, ನನಗೆ ಹೆಚ್ಚು ತೃಪ್ತಿ ನೀಡಿದ್ದು ಭಾರತ್ ಜೋಡೋ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯಗೊಳ್ಳಬಹುದು ಎಂಬುದು' ಎಂದು ಸೋನಿಯಾ ಗಾಂಧಿ ರಾಯಪುರದಲ್ಲಿ ಪಕ್ಷದ 85ನೇ ಮಹಾಧಿವೇಶನದಲ್ಲಿ ಸರ್ವಸದಸ್ಯರನ್ನು ಉದ್ದೇಶಿಸಿ ಶನಿವಾರ ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ವಿರುದ್ಧ ಹೋರಾಡುವ ಧೈರ್ಯವಿದೆ: ಮಹಾಧಿವೇಶನದಲ್ಲಿ ಪ್ರಿಯಾಂಕಾ ಗಾಂಧಿ
'ಯಾತ್ರೆಯು ಕಾಂಗ್ರೆಸ್‌ಗೆ ಮಹತ್ವದ ತಿರುವು ನೀಡಿದೆ. ಭಾರತದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಾರೆ ಎಂಬುದನ್ನು ಇದು ಸಾಬೀತುಪಡಿಸಿದೆ' ಎಂದು ಅವರು ಹೇಳಿದರು.
'ಇದು (ಭಾರತ್ ಜೋಡೋ ಯಾತ್ರೆ) ಸಮೂಹ ಸಂಪರ್ಕ ಕಾರ್ಯಕ್ರಮದ ಮೂಲಕ ನಮ್ಮ ಪಕ್ಷ ಮತ್ತು ಸಾರ್ವಜನಿಕರ ನಡುವಿನ ಸಂವಾದದ ಶ್ರೀಮಂತ ಪರಂಪರೆಯನ್ನು ನವೀಕರಿಸಿದೆ. ಕಾಂಗ್ರೆಸ್ ಜನರೊಂದಿಗೆ ನಿಂತಿದೆ ಮತ್ತು ಅವರಿಗಾಗಿ ಹೋರಾಡಲು ಸಿದ್ಧವಾಗಿದೆ ಎಂಬುದನ್ನು ಇದು ನಮಗೆ ತೋರಿಸಿದೆ' ಎಂದು ಯಾತ್ರೆಗಾಗಿ ಶ್ರಮಿಸುತ್ತಿರುವ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು.
ಯಾತ್ರೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲಾ ನಾಯಕರು ಮತ್ತು ದೇಶದ ಜನತೆಗೆ ಸೋನಿಯಾ ಗಾಂಧಿ ಧನ್ಯವಾದ ಹೇಳಿದರು. ಯಾತ್ರೆಯ ಯಶಸ್ಸಿನಲ್ಲಿ ಅವರ ದೃಢನಿರ್ಧಾರ ಮತ್ತು ನಿರ್ಣಾಯಕ ನಾಯಕತ್ವ ವಹಿಸಿದ್ದ ರಾಹುಲ್ ಜಿ ಅವರಿಗೆ ನಾನು ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು.