
ಗಲ್ವಾನ್ ಹುತಾತ್ಮ ಯೋಧನ ಪ್ರತಿಮೆ
ಪಾಟ್ನ: 2020 ರ ಗಲ್ವಾನ್ ಕಣಿಗೆ ಘರ್ಷಣೆಯಲ್ಲಿ ಹುತಾತ್ಮರಾದ ಯೋಧನಿಗೆ ಸ್ಮಾರಕ ನಿರ್ಮಿಸಿದ್ದಕ್ಕಾಗಿ ಆತನ ತಂದೆಯನ್ನು ಪೊಲೀಸರು ಥಳಿಸಿ ಬಂಧಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಸ್ಮಾರಕ ನಿರ್ಮಿಸಿದ್ದಕ್ಕಾಗಿ ಪೊಲೀಸರು ಯೋಧನ ತಂದೆಯನ್ನು ಥಳಿಸಿ ಬಂಧನಕ್ಕೊಳಪಡಿಸಿದ್ದಾರೆ ಎಂದು ಹುತಾತ್ಮ ಯೋಧನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಬಿಹಾರದ ವೈಶಾಲಿಯ ಜಂದಾಹದಲ್ಲಿ ಈ ಘಟನೆ ವರದಿಯಾಗಿದ್ದು ನಿರ್ಮಾಣವಾಗುತ್ತಿದ್ದದ್ದು ಹುತಾತ್ಮ ಯೋಧ ಜೈ ಕಿಶೋರ್ ಸಿಂಗ್ ಅವರದ್ದು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ ಈ ವಿಷಯ ಒತ್ತುವರಿಗೆ ಸಂಬಂಧಪಟ್ಟಿದ್ದಾಗಿದ್ದು, ಇದು ಭೂಮಾಲೀಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಹರಿನಾಥ್ ಹಾಗೂ ಸರ್ಕಾರಕ್ಕೆ ಸೇರಿದ ಜಾಗದಲ್ಲಿ ಪುತ್ಥಳಿಯೊಂದನ್ನು ಸ್ಥಾಪಿಸಲಾಗಿತ್ತು. ಈ ವಿಷಯವಾಗಿ
ಜ.23 ರಂದು ಎಸ್ ಸಿ/ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಬಳಿಕ ಪ್ರತಿಮೆ ಸುತ್ತಲೂ ಗೋಡೆಗಳನ್ನು ನಿರ್ಮಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಪ್ರತಿಮೆಯನ್ನು ಅವರ ಸ್ವಂತ ಜಾಗದಲ್ಲಿ ನಿರ್ಮಿಸಬಹುದಾಗಿತ್ತು. ಅಥವಾ ಸರ್ಕಾರದಿಂದ ಜಾಗ ಪಡೆಯಬಹುದಾಗಿತ್ತು. ಆ ರೀತಿಯಾಗಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಅಕ್ರಮ ಒತ್ತುವರಿಯ ಪರಿಣಾಮ ಭೂಮಾಲೀಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಎಸ್ ಡಿಪಿಒ ಮಹುವಾ ಹೇಳಿದ್ದಾರೆ.
ಸ್ವತಃ ಯೋಧರಾಗಿರುವ ಜೈ ಕಿಶೋರ್ ಸಿಂಗ್ ಅವರ ಸಹೋದರ ಪೊಲೀಸರ ವಿರುದ್ಧ ತಮ್ಮ ತಂದೆಯನ್ನು ಥಳಿಸಿರುವ ಆರೋಪ ಮಾಡಿದ್ದಾರೆ.