ಟಿಎಂಸಿ ಟ್ವಿಟರ್ ಖಾತೆ ಹ್ಯಾಕ್, ಹೆಸರು ಬದಲಾವಣೆ

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು  ಹ್ಯಾಕ್ ಮಾಡಲಾಗಿದ್ದು, 'ಯುಗ ಲ್ಯಾಬ್ಸ್ 'ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಜೊತೆಗೆ ಖಾತೆಯಲ್ಲಿನ ಡಿಸ್ ಪ್ಲೇ ಚಿತ್ರ ಕೂಡಾ ಬದಲಾಗಿದೆ
ಟಿಎಂಸಿ ಟ್ವಿಟರ್ ಖಾತೆ
ಟಿಎಂಸಿ ಟ್ವಿಟರ್ ಖಾತೆ

ಕೊಲ್ಕತ್ತಾ:  ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು  ಹ್ಯಾಕ್ ಮಾಡಲಾಗಿದ್ದು, 'ಯುಗ ಲ್ಯಾಬ್ಸ್ 'ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಜೊತೆಗೆ ಖಾತೆಯಲ್ಲಿನ ಡಿಸ್ ಪ್ಲೇ  ಚಿತ್ರ ಕೂಡಾ ಬದಲಾಗಿದೆ.

ದಿದಿ ಸುರಕ್ಷಾ ಕವಚ ಬಂಗಾಳದ ಪ್ರತಿಯೊಬ್ಬ ನಿವಾಸಿಗೆ ವಯಸ್ಸು, ಲಿಂಗ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಮೂಲಭೂತ ಪೋಷಣೆಯನ್ನು ಭದ್ರಪಡಿಸುವ ಒಂದು ದೊಡ್ಡ ಪ್ರಯತ್ನವಾಗಿದೆ. ರಾಜ್ಯಾದ್ಯಂತ ಅಂತರ್ಗತ ಬೆಳವಣಿಗೆಯನ್ನು ಸಾಧಿಸಲು ಮತ್ತು ಕಲ್ಯಾಣ ವನ್ನು  ವಿಸ್ತರಿಸಲು ಮನೆಗಳಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಯುಗಾ ಲ್ಯಾಬ್ಸ್ ನಿಂದ ಕೊನೆಯ ಟ್ವೀಟ್ ಮಾಡಲಾಗಿದೆ. ಲೋಗೋ ಕೂಡಾ ಬದಲಾಗಿದ್ದು, ಕಪ್ಪು ಫಾಂಟ್‌ನಲ್ಲಿ 'Y' ಆಕಾರದಲ್ಲಿ ಕಾಣಿಸಿಕೊಂಡಿದೆ.

ಈ ಬಗ್ಗೆ ಟಿಎಂಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.  ಕಳೆದ ವರ್ಷ ಉತ್ತರ ಪ್ರದೇಶ ಸಿಎಂ ಕಚೇರಿ ಅಧಿಕೃತ ಟ್ವಿಟರ್ ಖಾತೆ ಕೂಡಾ ಹ್ಯಾಕ್ ಆಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com