ಚೀನಾದೊಂದಿಗಿನ ಬಾಂಧವ್ಯ ಸಹಜವಾಗಿಲ್ಲ, ಎಲ್ಎಸಿಯಲ್ಲಿನ ಬದಲಾವಣೆ ಯತ್ನವನ್ನು ಭಾರತ ಒಪ್ಪಲ್ಲ: ಜೈಶಂಕರ್

ಭಾರತ ಗಡಿ ಭಾಗದಲ್ಲಿ ವಾಸ್ತವ ನಿಯಂತ್ರ ರೇಖೆಯ ಬಳಿ ಯಾವುದೇ ಬದಲಾವಣೆಯನ್ನೂ ಒಪ್ಪುವುದಿಲ್ಲ. ಚೀನಾದೊಂದಿಗೆ ಭಾರತದ ಬಾಂಧವ್ಯ ಸಹಜವಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 
ವಿದೇಶಾಂಗ ಸಚಿವ ಜೈಶಂಕರ್.
ವಿದೇಶಾಂಗ ಸಚಿವ ಜೈಶಂಕರ್.

ಸೈಪ್ರಸ್: ಭಾರತ ಗಡಿ ಭಾಗದಲ್ಲಿ ವಾಸ್ತವ ನಿಯಂತ್ರ ರೇಖೆಯ ಬಳಿ ಯಾವುದೇ ಬದಲಾವಣೆಯನ್ನೂ ಒಪ್ಪುವುದಿಲ್ಲ. ಚೀನಾದೊಂದಿಗೆ ಭಾರತದ ಬಾಂಧವ್ಯ ಸಹಜವಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 

ಚೀನಾಗೆ ಸಂಬಂಧಿದಂತೆ ಮೂಲ ವಿಷಯಗಳಲ್ಲಿ ಭಾರತ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಸೈಪ್ರಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡಿರುವ ಜೈಶಂಕರ್ ಹೇಳಿದ್ದಾರೆ. 

ಇದೇ ವೇಳೆ ಜೈಶಂಕರ್ ಪಾಕ್ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಭಾರತದೊಂದಿಗೆ ಮಾತುಕತೆ ನಡೆಸಲು ಒತ್ತಾಯಿಸುವುದಕ್ಕೆ ಭಯೋತ್ಪಾದನೆಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
 
ಭಾರತಕ್ಕೆ ಗಡಿಯಲ್ಲಿ ಸವಾಲುಗಳಿದ್ದು ಕೋವಿಡ್-19 ಅವಧಿಯಲ್ಲಿ ಗಡಿ ವಿವಾದಗಳು ಉಲ್ಬಣಿಸಿವೆ ಎಂದು ಜೈಶಂಕರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com