ವಿಜ್ಞಾನವು ಭಾರತವನ್ನು 'ಆತ್ಮ ನಿರ್ಭರ್' ಮಾಡುವ ಗುರಿಯನ್ನು ಹೊಂದಿರಬೇಕು: ಪ್ರಧಾನಿ ಮೋದಿ

ಇಂದು ಭಾರತವು ಸ್ಟಾರ್ಟ್‌ಅಪ್‌ ವಲಯದಲ್ಲಿ ಅಗ್ರ 3 ರಾಷ್ಟ್ರಗಳಲ್ಲಿ ಒಂದಾಗಿದೆ. 2015 ರವರೆಗೆ ನಾವು 130 ದೇಶಗಳ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿದ್ದೆವು. 2022ರಲ್ಲಿ 40 ನೇ ಸ್ಥಾನವನ್ನು ತಲುಪಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಇಂದು ಭಾರತವು ಸ್ಟಾರ್ಟ್‌ಅಪ್‌ ವಲಯದಲ್ಲಿ ಅಗ್ರ 3 ರಾಷ್ಟ್ರಗಳಲ್ಲಿ ಒಂದಾಗಿದೆ. 2015 ರವರೆಗೆ ನಾವು 130 ದೇಶಗಳ ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 81 ನೇ ಸ್ಥಾನದಲ್ಲಿದ್ದೆವು. 2022ರಲ್ಲಿ 40 ನೇ ಸ್ಥಾನವನ್ನು ತಲುಪಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಉದ್ಘಾಟನಾ ಅಧಿವೇಶನವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಇಂದು ವಿಜ್ಞಾನ ಕ್ಷೇತ್ರ ಭಾರತವನ್ನು ಆತ್ಮನಿರ್ಭರ್ ಮಾಡುತ್ತಿದೆ. ಪ್ರಯೋಗಾಲಯದಿಂದ ಪ್ರಾಯೋಗಿಕವಾಗಿ ಹೋದಾಗ ಮಾತ್ರ ವಿಜ್ಞಾನದ ಪ್ರಯತ್ನಗಳು ಫಲ ನೀಡುತ್ತವೆ. 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದ್ದು, ವಿಜ್ಞಾನದ ಬಳಕೆಯೊಂದಿಗೆ ಭಾರತದ ಸಿರಿಧಾನ್ಯಗಳ ಬಳಕೆಯನ್ನು ಇನ್ನಷ್ಟು ಸುಧಾರಿಸಬೇಕು ಎಂದು ಹೇಳಿದರು.

ಭಾರತದ ಅಗತ್ಯಗಳನ್ನು ಪೂರೈಸಲು ವೈಜ್ಞಾನಿಕ ಅಭಿವೃದ್ಧಿ ನಮ್ಮ ವಿಜ್ಞಾನಿ ಸಮುದಾಯಕ್ಕೆ ಸ್ಫೂರ್ತಿಯಾಗಬೇಕು,ಜಾಗತಿಕ ಜನಸಂಖ್ಯೆಯ ಶೇಕಡಾ 17ರಿಂದ 18ರಷ್ಟು ಮಂದಿ ಭಾರತದಲ್ಲಿ ವಾಸಿಸುತ್ತಿದ್ದಾರೆ. ಭಾರತವನ್ನು ಸಶಕ್ತಗೊಳಿಸುವ ವೈಜ್ಞಾನಿಕ ಆವಿಷ್ಕಾರಗಳು ಈ ಜಾಗತಿಕ ಜನಸಂಖ್ಯೆಯನ್ನು ಸಬಲೀಕರಣಗೊಳಿಸಲು ಸಹ ಸಹಾಯ ಮಾಡುತ್ತವೆ ಎಂದರು. 

ಅಮರಾವತಿ ರೋಡ್ ಕ್ಯಾಂಪಸ್‌ನಲ್ಲಿ ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯ (RTMNU) ಆಯೋಜಿಸಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಕುಲಪತಿ, ಕೇಂದ್ರ ಸಚಿವರು ಮತ್ತು RTMNU ಶತಮಾನೋತ್ಸವ ಆಚರಣೆಗಳ ಸಲಹಾ ಸಮಿತಿಯ ಅಧ್ಯಕ್ಷರು, ನಿತಿನ್ ಗಡ್ಕರಿ, ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಜರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com