ರಾಹುಲ್ ಗಾಂಧಿ 'ಶಾಶ್ವತವಾಗಿ ಗೊಂದಲಕ್ಕೊಳಗಾಗಿದ್ದಾರೆ', ಚೀನಾದ ಮುಂದೆ ಭಾರತ ಶರಣಾಗಲು ಬಯಸುತ್ತಾರೆ: ಬಿಜೆಪಿ

ಗಡಿ ಉದ್ವಿಗ್ನತೆಯ ಕುರಿತು ಇತ್ತೀಚಿನ ಹೇಳಿಕೆಗಳ ಬಗ್ಗೆ ರಾಹುಲ್ ಗಾಂಧಿ ಅವರು 'ಶಾಶ್ವತವಾಗಿ ಗೊಂದಲಕ್ಕೊಳಗಾಗಿದ್ದಾರೆ' ಎಂದು ಲೇವಡಿ ಮಾಡಿರುವ ಬಿಜೆಪಿ, ಭಾರತವು ಚೀನಾದ ಮುಂದೆ ಶರಣಾಗಬೇಕೆಂದು ಕಾಂಗ್ರೆಸ್ ನಾಯಕ ಬಯಸುತ್ತಿದ್ದಾರೆ ಎಂದು ಮಂಗಳವಾರ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗಡಿ ಉದ್ವಿಗ್ನತೆಯ ಕುರಿತು ಇತ್ತೀಚಿನ ಹೇಳಿಕೆಗಳ ಬಗ್ಗೆ ರಾಹುಲ್ ಗಾಂಧಿ ಅವರು 'ಶಾಶ್ವತವಾಗಿ ಗೊಂದಲಕ್ಕೊಳಗಾಗಿದ್ದಾರೆ' ಎಂದು ಲೇವಡಿ ಮಾಡಿರುವ ಬಿಜೆಪಿ, ಭಾರತವು ಚೀನಾದ ಮುಂದೆ ಶರಣಾಗಬೇಕೆಂದು ಕಾಂಗ್ರೆಸ್ ನಾಯಕ ಬಯಸುತ್ತಿದ್ದಾರೆ ಎಂದು ಮಂಗಳವಾರ ಆರೋಪಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ವ್ಯಂಗ್ಯವಾಡಿದರು ಮತ್ತು ಕಾಂಗ್ರೆಸ್ ನಾಯಕ ತಮ್ಮ ಪ್ರಯಾಣದ ಸಮಯದಲ್ಲಿ ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಿದರು.

ದೇಶದಾದ್ಯಂತ ಸಂಚರಿಸುವುದರಿಂದ ಮಾತ್ರ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತೀಯತೆಯನ್ನು ಅವರು ಅರ್ಥಮಾಡಿಕೊಳ್ಳಬೇಕು. ಭಾರತದ ಆವಿಷ್ಕಾರವು ನಾಲ್ಕು ತಲೆಮಾರುಗಳಿಂದ (ಗಾಂಧಿ ಕುಟುಂಬ) ನಡೆಯುತ್ತಿದೆ ಎಂದು ತ್ರಿವೇದಿ ಅವರು ಜವಾಹರಲಾಲ್ ನೆಹರು ಅವರ 'ಡಿಸ್ಕವರಿ ಆಫ್ ಇಂಡಿಯಾ' ಬಗ್ಗೆ ಉಲ್ಲೇಖಿಸಿದರು.

ನಟ ಕಮಲ್ ಹಾಸನ್ ಅವರೊಂದಿಗಿನ ಸಂದರ್ಶನದಲ್ಲಿ ಗಡಿ ಉದ್ವಿಗ್ನತೆಯ ಕುರಿತು ರಾಹುಲ್ ಗಾಂಧಿಯವರ ಟೀಕೆಗಳನ್ನು ಉಲ್ಲೇಖಿಸಿದ ತ್ರಿವೇದಿ, 'ತಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ನಡೆದಂತೆಯೇ ಚೀನಾದ ಮುಂದೆ ಭಾರತ ಶರಣಾಗಬೇಕು ಎಂದು ರಾಹುಲ್ ಗಾಂಧಿ ಅವರು ಬಯಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಆ ಸಂದರ್ಶನವು 'ಶಾಶ್ವತವಾಗಿ ಗೊಂದಲಕ್ಕೊಳಗಾದ ಮತ್ತು ಉದ್ವಿಗ್ನ ನಾಯಕ' ಹಾಗೂ 'ಗೊಂದಲಕ್ಕೊಳಗಾದ ಸಿನಿಮಾ ನಟರ' ನಡುವಿನ ಸಂವಾದವಾಗಿದೆ. 'ಆದರೆ ಅವರ ಭಾರತದ ಬಗೆಗಿನ ಭ್ರಮೆಯನ್ನು ಹೊರಗಾಕಿದ್ದಾರೆ. ಚೀನಾದ ಬಗ್ಗೆ ಅವರ ಹೇಳಿಕೆಯು ಭಾರತವು ಚೀನಾಕ್ಕೆ ತಲೆಬಾಗಬೇಕು ಎಂಬುದನ್ನು ಸೂಚಿಸುತ್ತದೆ' ಎಂದು ತ್ರಿವೇದಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com