ಬೇಷರಂ ರಂಗ್ ಹಾಡು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ತೆಗೆದು ಹಾಕಿ: ಉತ್ತರ ಪ್ರದೇಶ ಮಕ್ಕಳ ಕಲ್ಯಾಣ ಸಮಿತಿ

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯು (CWC) ಉತ್ತರ ಪ್ರದೇಶ ೇಪೊಲೀಸ್ ಮಹಾನಿರ್ದೇಶಕರಿಗೆ ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಕೇಳಿಕೊಂಡಿದೆ. 
ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿನಲ್ಲಿ ಶಾರೂಕ್ ಖಾನ್, ದೀಪಿಕಾ ಪಡುಕೋಣೆ
ಪಠಾಣ್ ಚಿತ್ರದ ಬೇಷರಂ ರಂಗ್ ಹಾಡಿನಲ್ಲಿ ಶಾರೂಕ್ ಖಾನ್, ದೀಪಿಕಾ ಪಡುಕೋಣೆ

ಲಖನೌ: ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯು (CWC) ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕುವಂತೆ ಕೇಳಿಕೊಂಡಿದೆ. 

ಹಾಡು ಹದಿಹರೆಯದವರ ಮನಸ್ಸಿನ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು ಮಕ್ಕಳ ಕಲ್ಯಾಣ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್‌ನ ಹಾಡು ಅದರ ಸಾಹಿತ್ಯ ಮತ್ತು ನಾಯಕಿ ಧರಿಸಿರುವ ಕೆಸರು ಕೇಸರಿ ಉಡುಪಿನಿಂದ ಈಗಾಗಲೇ ಸಾಕಷ್ಟು ವಿವಾದದಲ್ಲಿ ಮ ವಿವಾದದಲ್ಲಿ ಮುಳುಗಿದೆ.

ವಿವಾದದ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹಾಡಿನ ಬಗ್ಗೆ ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015 ರ ಸೆಕ್ಷನ್ 30 (xii) ಅಡಿಯಲ್ಲಿ ಅಧಿಕಾರವನ್ನು ಬಳಸಿಕೊಂಡು ಸಿಡಬ್ಲ್ಯುಸಿ ಬಹ್ರೈಚ್ (ಮ್ಯಾಜಿಸ್ಟ್ರೇಟ್ ಬೆಂಚ್) ಸ್ವಯಂ ಪ್ರೇರಣೆಯಿಂದ ಕೇಸು ದಾಖಲಿಸಿಕೊಂಡಿದೆ. ಉತ್ತರ ಪ್ರದೇಶ ಸರ್ಕಾರವು ಹದಿಹರೆಯದವರ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಮಾರ್ಟ್ ಫೋನ್‌ಗಳನ್ನು ಒದಗಿಸಿದೆ, ಆದರೆ ಮಕ್ಕಳು ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಿರುವ ಯಾವುದನ್ನೂ ನೋಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಶನಿವಾರ ಯುಪಿ ಡಿಜಿಪಿಗೆ ಪತ್ರ ಬರೆದಿದೆ. 

ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಸಾಮಾಜಿಕ ಮಾಧ್ಯಮದಿಂದ ಅಶ್ಲೀಲ ವಿಷಯವನ್ನು ತೆಗೆದುಹಾಕುವುದು ಅವಶ್ಯಕ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪತ್ರಕ್ಕೆ ಸಿಡಬ್ಲ್ಯುಸಿ ಬಹ್ರೈಚ್ ಪೀಠದ ಮುಖ್ಯಸ್ಥ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ದೀಪಮಲಾ ಪ್ರಧಾನ್, ಅರ್ಚನಾ ಪಾಂಡೆ ಮತ್ತು ನವನೀತ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸಹಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com