ಮುಂಬೈ ವಿಶೇಷ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದೇವೆನ್ ಭಾರ್ತಿ

ಹಿರಿಯ ಐಪಿಎಸ್ ಅಧಿಕಾರಿ ದೇವೆನ್ ಭಾರ್ತಿ ಅವರು ಗುರುವಾರ ಮುಂಬೈ ವಿಶೇಷ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ದೇವೆನ್ ಭಾರ್ತಿ
ದೇವೆನ್ ಭಾರ್ತಿ

ಮುಂಬೈ: ಹಿರಿಯ ಐಪಿಎಸ್ ಅಧಿಕಾರಿ ದೇವೆನ್ ಭಾರ್ತಿ ಅವರು ಗುರುವಾರ ಮುಂಬೈ ವಿಶೇಷ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ, ರಾಷ್ಟ್ರ ರಾಜಧಾನಿ ದೆಹಲಿಯ ಮಾದರಿಯಲ್ಲಿ ವಿಶೇಷ ಪೊಲೀಸ್ ಆಯುಕ್ತರ ಹುದ್ದೆಯನ್ನು ಸೃಷ್ಟಿಸಿ ಬುಧವಾರ ಆದೇಶ ಹೊರಡಿಸಿತ್ತು. ಅಲ್ಲದೆ ಆ ಹೊಸ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ ದೇವೆನ್ ಭಾರ್ತಿ ಅವರನ್ನು ನೇಮಕ ಮಾಡಿದೆ.

1994ನೇ ಬ್ಯಾಚ್ ಐಪಿಎಸ್ ಅಧಿಕಾರಿ, ಪ್ರಸ್ತುತ ಹೆಚ್ಚುವರಿ ಮಹಾನಿರ್ದೇಶಕರಾಗಿರುವ ಭಾರ್ತಿ ಅವರು ಪೋಸ್ಟಿಂಗ್‌ಗಾಗಿ ಕಾಯುತ್ತಿದ್ದರು. ಇದಕ್ಕು ಮುನ್ನ ನಗರದಲ್ಲಿ ಜಂಟಿ ಪೊಲೀಸ್ ಕಮಿಷನರ್(ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com