ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹರಿಯಾಣ, ಪಂಜಾಬ್‌ ಗಢಗಢ: ನರ್ನಾಲ್ ತಾಪಮಾನ 2.5 ಡಿಗ್ರಿ ಸೆಲ್ಸಿಯಸ್‌

ಉತ್ತರ ಭಾರತ ಶೀತ ಹಾಗೂ ಮಂಜು ಮುಸುಕಿದ ವಾತಾವರಣದಿಂದ ಗಢಗಢ ನಡುಗುತ್ತಿದ್ದು, ಹರಿಯಾಣ ಮತ್ತು ಪಂಜಾಬ್‌ನ ಹಲವು ಸ್ಥಳಗಳಲ್ಲಿ ಶುಕ್ರವಾರ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ದಾಖಲಾಗಿದೆ.

ಚಂಡೀಗಢ: ಉತ್ತರ ಭಾರತ ಶೀತ ಹಾಗೂ ಮಂಜು ಮುಸುಕಿದ ವಾತಾವರಣದಿಂದ ಗಢಗಢ ನಡುಗುತ್ತಿದ್ದು, ಹರಿಯಾಣ ಮತ್ತು ಪಂಜಾಬ್‌ನ ಹಲವು ಸ್ಥಳಗಳಲ್ಲಿ ಶುಕ್ರವಾರ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ದಾಖಲಾಗಿದೆ.

ಹವಾಮಾನ ಇಲಾಖೆಯ ವರದಿಯ ಪ್ರಕಾರ, ನರ್ನಾಲ್ ಹರಿಯಾಣದ ಅತ್ಯಂತ ತಂಪಾದ ಸ್ಥಳವಾಗಿದ್ದು, ಕನಿಷ್ಠ ತಾಪಮಾನ 2.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇನ್ನು ಕನಿಷ್ಠ 4 ಡಿಗ್ರಿ ತಾಪಮಾನ ದಾಖಲಾಗಿರುವ ಹಿಸಾರ್ ಕೂಡ ಕೊರೆಯುವ ಚಳಿಯಿಂದ ಕಂಗೆಟ್ಟಿದೆ. ಭಿವಾನಿಯಲ್ಲಿ 5.8 ಡಿಗ್ರಿ ಸೆಲ್ಸಿಯಸ್, ಕರ್ನಾಲ್ ನಲ್ಲಿ 4.8 ಡಿಗ್ರಿ, ರೋಹ್ಟಕ್ ನಲ್ಲಿ 6.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅಂಬಾಲಾದಲ್ಲಿ ಕನಿಷ್ಠ ತಾಪಮಾನವು 4.8 ಡಿಗ್ರಿ ಸೆಲ್ಸಿಯಸ್‌ ಇದೆ.

ಪಂಜಾಬ್‌ನಲ್ಲಿ, ಬಾಲಚೌರ್‌ನಲ್ಲಿ ಕನಿಷ್ಠ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಟಿಂಡಾದಲ್ಲಿ 3.6 ಡಿಗ್ರಿ ಸೆಲ್ಸಿಯಸ್, ಗುರುದಾಸ್‌ಪುರದಲ್ಲಿ 3.8 ಡಿಗ್ರಿ, ಲುಧಿಯಾನದಲ್ಲಿ 4.6 ಡಿಗ್ರಿ, ಪಟಿಯಾಲದಲ್ಲಿ 5.5 ಡಿಗ್ರಿ, ಅಮೃತಸರದಲ್ಲಿ 5 ಡಿಗ್ರಿ ತಾಪಮಾನ ದಾಖಲಾಗಿದೆ.

ಮೊಹಾಲಿಯಲ್ಲಿ ಕನಿಷ್ಠ ತಾಪಮಾನ 5.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇದೆ.

ಉಭಯ ರಾಜ್ಯಗಳ ಸಾಮಾನ್ಯ ರಾಜಧಾನಿಯಾಗಿರುವ ಚಂಡೀಗಢದಲ್ಲಿ ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com