ಲೈಂಗಿಕ ಕಿರುಕುಳ ಪ್ರಕರಣ: ದೂರುದಾರ ಬಾಲಕಿ ನಾಪತ್ತೆ; ಆರೋಪಿಯನ್ನು ಖುಲಾಸೆಗೊಳಿಸಿದ ಮಹಾರಾಷ್ಟ್ರ ಕೋರ್ಟ್
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ 30 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.
Published: 06th January 2023 04:17 PM | Last Updated: 06th January 2023 08:11 PM | A+A A-

ಸಾಂದರ್ಭಿಕ ಚಿತ್ರ
ಥಾಣೆ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ 30 ವರ್ಷದ ವ್ಯಕ್ತಿಯನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.
ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ವಿ ವಿ ವಿರ್ಕರ್ ಅವರು ಜನವರಿ 2 ರಂದು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದು, ಆದೇಶದ ಪ್ರತಿ ಶುಕ್ರವಾರ ಲಭ್ಯವಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಘಟನೆಯ ಸಮಯದಲ್ಲಿ 16 ವರ್ಷ ವಯಸ್ಸಿನ ಮತ್ತು ಭಿವಂಡಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮತ್ತು ಆರೋಪಿತ ವ್ಯಕ್ತಿ ಪರಸ್ಪರ ಪರಿಚಿತರು.
ಇದನ್ನು ಓದಿ: ತಮಿಳುನಾಡು: ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ 19 ವರ್ಷದ ಯುವತಿಗೆ ಬೆಂಕಿ ಹಚ್ಚಿದ ವ್ಯಕ್ತಿ
2014ರ ಜನವರಿಯಲ್ಲಿ ಆರೋಪಿಯು ಬಾಲಕಿಯನ್ನು ಹಿಂಬಾಲಿಸಿ ಬಸ್ ನಿಲ್ದಾಣದಲ್ಲಿ ತನ್ನನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದರು.
ಆದರೆ ಬಾಲಕಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರವೂ ಆ ವ್ಯಕ್ತಿ, ಬಾಲಕಿಯನ್ನು ಹಿಂಬಾಲಿಸಿದನು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಮೊದಲು ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬಾಲಕಿ ಮತ್ತು ಆಕೆಯ ತಾಯಿ ತಮ್ಮ ಹೇಳಿಕೆಗಳನ್ನು ದಾಖಲಿಸಲು ಎಂದಿಗೂ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಅಲ್ಲದೆ ಅವರು ನೀಡಿದ ನಿವಾಸದ ವಿಳಾಸದಲ್ಲಿ ಅವರು ಪತ್ತೆಯಾಗಿಲ್ಲ ಮತ್ತು ಪತ್ತೆಹಚ್ಚಲಾಗಲಿಲ್ಲ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಪ್ರಕರಣದಲ್ಲಿ ದೂರುದಾರರ ಅನುಪಸ್ಥಿತಿಯಲ್ಲಿ ಆರೋಪಿಯನ್ನು ಅಪರಾಧಿ ಎಂದು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ.