ಸ್ಕೂಟರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 1.5 ಕಿ.ಮೀ ಎಳೆದೊಯ್ದ ಟ್ರಕ್!
ಭೀಕರ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾದ ಸಿಲಿಗುರಿಯಲ್ಲಿ ಡಂಪರ್ ಟ್ರಕ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 1.5 ಕಿ.ಮೀ ಎಳೆದೊಯ್ದಿದೆ.
Published: 06th January 2023 01:21 AM | Last Updated: 06th January 2023 02:36 PM | A+A A-

ಸಾಂದರ್ಭಿಕ ಚಿತ್ರ
ಕೋಲ್ಕತ್ತ: ಭೀಕರ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೋಲ್ಕತ್ತಾದ ಸಿಲಿಗುರಿಯಲ್ಲಿ ಡಂಪರ್ ಟ್ರಕ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 1.5 ಕಿ.ಮೀ ಎಳೆದೊಯ್ದಿದೆ.
ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಕಳೆದ 2-3 ದಿನಗಳಿಂದ ಇದೇ ಮಾದರಿಯ ಅಪಘಾತಗಳು ಸಂಭವಿಸಿದ್ದು ಕಾರು ಹಾಗೂ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರು ಟ್ರಕ್ ಗೆ ಸಿಲುಕಿ ಹಲವು ಕಿ.ಮೀ ದೂರದ ವರೆಗೆ ಎಳೆದೊಯ್ಯಲ್ಪಟ್ಟು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮರುಕಳಿಸಿದ ದೆಹಲಿ ಮಾದರಿಯ ಅಪಘಾತ: ಸ್ಕೂಟಿಗೆ ಡಿಕ್ಕಿ, ಮಹಿಳೆಯನ್ನು 3 ಕಿ.ಮೀ ಎಳೆದೊಯ್ದ ಟ್ರಕ್!
ಗುರುವಾರದಂದು ರಾತ್ರಿ 8:30 ಕ್ಕೆ ಉತ್ತರ ಬಂಗಾಳ ಕ್ಯಾಂಪಸ್ ನಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಅನಂತ ದಾಸ್ ಎಂದು ಗುರುತಿಸಲಾಗಿದೆ ಆತ ಮನೆಗೆ ತೆರಳುತ್ತಿದ್ದಾಗ ಡಂಪರ್ ಟ್ರಕ್ ಬಂದು ದ್ವಿಚಕ್ರವಾಹನಕ್ಕೆ ಢಿಕ್ಕಿ ಹೊಡೆದಿದೆ.
ಮೃತ ದಾಸ್ ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದು, ಟ್ರಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಸ್ಕೂಟರ್ ಟ್ರಕ್ ನ ಬದಿಗೆ ಸಿಲುಕಿಕೊಂಡಿದೆ ಪರಿಣಾಮ 1.5 ಕಿ.ಮೀ ವರೆಗೆ ದೇಹ ಎಳೆದೊಯ್ಯಲ್ಪಟ್ಟಿದೆ.
ಅಪಘಾತದ ವೇಗಕ್ಕೆ ದ್ವಿಚಕ್ರವಾಹನ ಬೆಂಕಿ ಹೊತ್ತಿಕೊಂಡಿದ್ದು ದೇಹವೂ ಸುಟ್ಟಿದೆ. ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರಾದರೂ ಆ ವೇಳೆಗೆ ದಾಸ್ ಮೃತಪಟ್ಟಿದ್ದರು. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ.