ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ಆರಂಭ, ಐತಿಹಾಸಿಕ ಹೆಜ್ಜೆ- ಡಿಸಿಎಂ ತೇಜಸ್ವಿ ಯಾದವ್

ಬಿಹಾರದಲ್ಲಿ ಶನಿವಾರದಿಂದ ಜಾತಿ ಆಧಾರಿತ ಜನಗಣತಿ ಆರಂಭವಾಗಿದ್ದು, ಇದನ್ನು ಐತಿಹಾಸಿಕ ಹೆಜ್ಜೆಎಂದು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬಣ್ಣಿಸಿದ್ದಾರೆ.
ಬಿಹಾರ ಡಿಸಿಎಂ ತೇಜಸ್ವಿ ಯಾದವ್
ಬಿಹಾರ ಡಿಸಿಎಂ ತೇಜಸ್ವಿ ಯಾದವ್

ಪಾಟ್ನಾ: ಬಿಹಾರದಲ್ಲಿ ಶನಿವಾರದಿಂದ ಜಾತಿ ಆಧಾರಿತ ಜನಗಣತಿ ಆರಂಭವಾಗಿದ್ದು, ಇದನ್ನು ಐತಿಹಾಸಿಕ ಹೆಜ್ಜೆಎಂದು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬಣ್ಣಿಸಿದ್ದಾರೆ. ಸಮಾಜದಲ್ಲಿನ ದುರ್ಬಲ ವರ್ಗಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳನ್ನು ತಲುಪಿಸಲು ಜನಗಣತಿಯಿಂದ ವೈಜ್ಞಾನಿಕವಾಗಿ ಮಾಹಿತಿ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. 

ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರದಿಂದ ಐತಿಹಾಸಿಕ ಹೆಜ್ಜೆಯನ್ನಿಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ, ಜನರಿಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ವೈಜ್ಞಾನಿಕವಾಗಿ ಮಾಹಿತಿ ದೊರೆಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.  ಬಿಜೆಪಿ ಬಡವರ ವಿರೋಧಿಯಾಗಿದ್ದು, ಯಾವಾಗಲೂ ಜಾತಿ ಜನಗಣತಿ ವಿರೋಧಿಸುತ್ತಾ ಬಂದಿದೆ ಎಂದರು.

ಬಿಹಾರದಾದ್ಯಂತ ಎರಡು ಹಂತಗಳಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಎಲ್ಲಾ ಮನೆಗಳ್ಳಲೂ ತಲೆ ಎಣಿಕೆ ನಡಸಲಾಗುವುದು, ಇದು ಜನವರಿ 21ರವರೆಗೂ ಮುಂದುವರೆಯಲಿದೆ. ಮಾರ್ಚ್ ನಿಂದ ಎರಡನೇ ಹಂತ ಆರಂಭವಾಗಲಿದೆ ಎಂದು ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಎಲ್ಲಾ ಜಾತಿಗಳು, ಉಪ ಜಾತಿಗಳು, ಧರ್ಮಗಳ ಮಾಹಿತಿ ಕಲೆ ಹಾಕಲಾಗುವುದು, ಎಲ್ಲಾ ಜನರ ಆರ್ಥಿಕ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು ಎಂದು ಅಧಿಕಾರಿ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com