ಅತ್ಯಾಚಾರ ಆರೋಪಿ ತಾಯಿಗೆ ಗುಂಡು ಹಾರಿಸಿದ 16 ವರ್ಷದ ಅಪ್ರಾಪ್ತೆ, ಬಂಧನ

ಅತ್ಯಾಚಾರವೆಸಗಿದ ಆರೋಪಿಯ ತಾಯಿಗೆ 16 ವರ್ಷದ ಅಪ್ರಾಪ್ತೆ ಗುಂಡು ಹಾರಿಸುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅತ್ಯಾಚಾರವೆಸಗಿದ ಆರೋಪಿಯ ತಾಯಿಗೆ 16 ವರ್ಷದ ಅಪ್ರಾಪ್ತೆ ಗುಂಡು ಹಾರಿಸುವ ಘಟನೆ ದೆಹಲಿಯಲ್ಲಿ ನಡೆದಿದೆ.

ಈಶಾನ್ಯ ದೆಹಲಿಯ ಘೋಂಡಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರವೆಸಗಿದ ಆರೋಪಿಯ 50 ವರ್ಷದ ತಾಯಿಗೆ 16 ವರ್ಷದ ಅಪ್ರಾಪ್ತ ಸಂತ್ರಸ್ಥೆ ಗುಂಡು ಹಾರಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡೇಟಿಗೆ ಒಳಗಾದ ಘೋಂಡಾದ ಸುಬಾಷ್ ಮೊಹಲ್ಲಾದ ನಿವಾಸಿ ಖುರ್ಷಿದಾ ಅವರ ಮಗನ ವಿರುದ್ಧ ಇದೇ ಬಾಲಕಿ 2021ರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎನ್ನಲಾಗಿದೆ.

ಗಾಯಗೊಂಡಿರುವ ಮಹಿಳೆ ಖುರ್ಷಿದಾ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಏನಿದು ಘಟನೆ?
ಶನಿವಾರ ಸಂಜೆ 5:30ರಲ್ಲಿ ಸುಭಾಷ್ ಮೊಹಲ್ಲಾದಲ್ಲಿ ಮಹಿಳೆಯೊಬ್ಬರ ಮೇಲೆ ಬಾಲಕಿಯೊಬ್ಬಳು ಗುಂಡು ಹಾರಿಸಿರುವುದಾಗಿ ಭಜನಪುರ ಪೊಲೀಸ್ ಠಾಣೆಗೆ ಕರೆ ಬಂದಿತು. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತ್ತು. ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಖುರ್ಷೀದಾ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ಬಂದಿದ್ದ ಬಾಲಕಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾಳೆ. ಆಪಾದಿತ ಬಾಲಕಿಯು ಖುರ್ಷಿದಾ ಅವರ ಪುತ್ರನ ವಿರುದ್ಧ 2021ರಲ್ಲಿ ಪೋಕ್ಸೊ ಕಾಯಿದೆ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಳು ಎಂಬುದು ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಆಪಾದಿತೆಯನ್ನು ಬಂಧಿಸಲಾಗಿದೆ. ಪಿಸ್ತೂಲನ್ನೂ ವಶಪಡಿಸಿಕೊಳ್ಳಲಾಗಿದೆ. ಗಾಯಗೊಂಡಿರುವ ಖುರ್ಷಿದಾ ಅವರಿಗೆ ಜೆಪಿಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ, ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಾಲಕಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com