ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ; ವಿಮಾನದಿಂದ 2 ಪ್ರಯಾಣಿಕರನ್ನು ಕೆಳಗಿಳಿಸಿದ ಗೋ ಫರ್ಸ್ಟ್

ಗೋ ಫರ್ಸ್ಟ್ ವಿಮಾನದಲ್ಲಿ ಸಿಬ್ಬಂದಿಗಳೊಂದಿಗೆ ದುರ್ವರ್ತನೆ ತೋರಿದ ಆರೋಪದಡಿ ಇಬ್ಬರು ವಿದೇಶಿ ನಾಗರಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. 2 passengers offloaded from Go First flight for 'misbehaving' with crew
ಗೋ ಫರ್ಸ್ಟ್ ವಿಮಾನ ಸಂಸ್ಥೆ
ಗೋ ಫರ್ಸ್ಟ್ ವಿಮಾನ ಸಂಸ್ಥೆ

ಮುಂಬೈ: ಗೋ ಫರ್ಸ್ಟ್ ವಿಮಾನದಲ್ಲಿ ಸಿಬ್ಬಂದಿಗಳೊಂದಿಗೆ ದುರ್ವರ್ತನೆ ತೋರಿದ ಆರೋಪದಡಿ ಇಬ್ಬರು ವಿದೇಶಿ ನಾಗರಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. 

ಇಬ್ಬರು ವಿದೇಶಿ ಪ್ರಜೆಗಳ ವಿರುದ್ಧ ವಿಮಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಈ ಘಟನೆಯ ಮಾಹಿತಿಯನ್ನು ವಿಮಾನ ಸಂಸ್ಥೆ ವೈಮಾನಿಕ ಸುರಕ್ಷತಾ ನಿಯಂತ್ರಕ ಡಿಜಿಸಿಎ ಗಮನಕ್ಕೆ ತರಲಾಗಿದೆ. 

2022 ರ ಅಂತ್ಯದಲ್ಲಿ ಟಾಟಾ ಸಮೂಹದ ಏರ್ ಇಂಡಿಯಾ ವಿಮಾದಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಯಾಣಿಕರು ಪ್ರಯಾಣದ ವೇಳೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.


ಇದನ್ನೂ ಓದಿ: ವಿಮಾನ ಹೊರಡುವುದಕ್ಕೂ ಮುನ್ನ ಕಸ್ಟಮ್ಸ್ ಇಲಾಖೆಯೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾಹಿತಿ ಹಂಚಿಕೊಳ್ಳುವಂತೆ ಏರ್ ಲೈನ್ಸ್ ಗಳಿಗೆ ಆದೇಶ
 
ಮಹಿಳಾ ಸಿಬ್ಬಂದಿಯ ಬಗ್ಗೆ ಅನುಚಿತವಾಗಿ ವರ್ತಿಸುವುದಷ್ಟೇ ಅಲ್ಲದೇ     ಆಕೆಯ ಬಗ್ಗೆ ಅಸಭ್ಯವಾದ ಮಾತುಗಳನ್ನಾಡುತ್ತಿದ್ದರು. ಪ್ರಯಾಣಿಕರ ಈ ವರ್ತನೆಗೆ ಅವರೊಂದಿಗೆ ಇದ್ದ ಸಹ ಪ್ರಯಾಣಿಕರೂ ಆಕ್ಷೇಪ ವ್ಯಕ್ತಪಡಿಸಿದರು ಎಂದು ಗೋ ಫರ್ಸ್ಟ್ ನ ವಕ್ತಾರರು ತಿಳಿಸಿದ್ದಾರೆ. 

ತಕ್ಷಣವೇ ಘಟನೆಯನ್ನು ಕ್ಯಾಪ್ಟನ್ ಗಮನಕ್ಕೆ ತಂದು ಅವರನ್ನು ವಿಮಾನದಿಂದ ಕೆಳಗೆ ಇಳಿಸಲಾಯಿತು ಮುಂದಿನ ಕ್ರಮಕ್ಕಾಗಿ ಅವರನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಲಾಯಿತು ಎಂದು ವಿಮಾನ ಸಂಸ್ಥೆ ಹೇಳಿದೆ. ವಿಮಾನ ಗೋವಾದಿಂದ ಮುಂಬೈ ಗೆ ತೆರಳಬೇಕಿತ್ತು, ಟೇಕ್ ಆಫ್ ಆಗುವುದಕ್ಕೂ ಮುನ್ನವೇ ಈ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com