ವಿಷ ಹಾಕಿರುವ ಅನುಮಾನ: ಲಖನೌ ಪೊಲೀಸರು ನೀಡಿದ ಟೀ ಕುಡಿಯಲು ನಿರಾಕರಿಸಿದ ಅಖಿಲೇಶ್ ಯಾದವ್

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಲಖನೌ ಪೊಲೀಸರು ನೀಡಿರುವ ಟೀ ಕುಡಿಯಲು ನಿರಾಕರಿಸಿ ಸುದ್ದಿಯಾಗಿದ್ದಾರೆ. 
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಲಖನೌ ಪೊಲೀಸರು ನೀಡಿರುವ ಟೀ ಕುಡಿಯಲು ನಿರಾಕರಿಸಿ ಸುದ್ದಿಯಾಗಿದ್ದಾರೆ. 

ಸಮಾಜವಾದಿ ಪಕ್ಷದ ನಾಯಕ ಮನೀಶ್ ಜಗನ್ ಅಗರ್ವಾಲ್ ಅವರ ವಿರುದ್ಧ ಮಹಿಳೆಯ ಬಗ್ಗೆ ಅವಮಾನಕಾರಿ ಭಾಷೆ ಪ್ರಯೋಗಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಎಫ್ಐಆರ್ ಗಳು ದಾಖಲಾಗಿದ್ದು ಅವರನ್ನು ಬಿಡುಗಡೆ ಮಾಡಲು ಆಗ್ರಹಿಸಿ ಅಖಿಲೇಶ್ ಯಾದವ್ ಪೊಲೀಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಅಖಿಲೇಶ್ ಯಾದವ್ ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಟೀ ನೀಡಲು ಮುಂದಾಗಿದ್ದರು. 

ಆದರೆ ಪೊಲೀಸರನ್ನು ನಂಬದ ಅಖಿಲೇಶ್ ಯಾದವ್, ಟೀ ನಲ್ಲಿ ವಿಷ ಹಾಕಿರುವ ಅನುಮಾನ ವ್ಯಕ್ತಪಡಿಸಿದ್ದು, ಟೀ ಕುಡಿಯಲು ನಿರಾಕರಿಸಿದ್ದಾರೆ.

ನಾನು ಪೊಲೀಸ್ ಅಧಿಕಾರಿಗಳು ನೀಡಿರುವ ಟೀ ಕುಡಿಯುವುದಿಲ್ಲ, ನನಗೆ ಬೇಕಿರುವ ಟೀ ನ್ನು ನಾನೇ ತರಿಸಿಕೊಳ್ಳುತ್ತೇನೆ, ನಾನು ಯಾರನ್ನೂ ನಂಬುವುದಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಅಷ್ಟೇ ಅಲ್ಲದೇ ಅಖಿಲೇಶ್ ಯಾದವ್ ತಾವು ಹೇಳಿದಂತೆಯೇ ಬೇರೆಡೆಯಿಂದ ಚಹಾ ತರಲು ವ್ಯಕ್ತಿಯೋರ್ವರಿಗೆ ಆದೇಶಿಸುತ್ತಿರುವುದು ವೀಡಿಯೋದಲ್ಲಿ ಬಹಿರಂಗವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com