ಸ್ನೇಹಿತನ ಪತ್ನಿಯೊಂದಿಗೆ ಸಂಬಂಧ; ಕುಡಿದ ಅಮಲಿನಲ್ಲಿ ಪೇಪರ್ ಕಟರ್‌ನಿಂದ ಗಂಟಲು ಸೀಳಿ ಕೊಲೆ ಮಾಡಿದ ವ್ಯಕ್ತಿ
ಪೇಪರ್ ಕಟರ್‌ನಿಂದ ಕೊಂದು ಸ್ನೇಹಿತನ ದೇಹವನ್ನು ಸುಟ್ಟ ಆರೋಪದ ಮೇಲೆ ಉತ್ತರ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ 27 ವರ್ಷದ ಯುವಕನೊಬ್ಬನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 08th January 2023 12:11 PM | Last Updated: 08th January 2023 12:11 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪೇಪರ್ ಕಟರ್‌ನಿಂದ ಕೊಂದು ಸ್ನೇಹಿತನ ದೇಹವನ್ನು ಸುಟ್ಟ ಆರೋಪದ ಮೇಲೆ ಉತ್ತರ ದೆಹಲಿಯ ವಜೀರಾಬಾದ್ ಪ್ರದೇಶದಲ್ಲಿ 27 ವರ್ಷದ ಯುವಕನೊಬ್ಬನನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ವಜೀರಾಬಾದ್ ನಿವಾಸಿ ಮುನಿಶಿದ್ಧೀನ್ ಎಂದು ಗುರುತಿಸಲಾಗಿದೆ.
ಮುನಿಶಿದ್ಧೀನ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಜೀರಾಬಾದ್‌ನ ರಾಮ್ ಘಾಟ್‌ನ ಮುಂಭಾಗದಲ್ಲಿ ಸುಟ್ಟ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ದೇಹವು ಸುಮಾರು ಶೇ 90 ರಷ್ಟು ಸುಟ್ಟಿದೆ ಎಂದು ಅವರು ಹೇಳಿದರು.
ಅಲ್ಲದೆ ಸ್ಥಳದ ಸಮೀಪ ಪೊದೆಗಳಲ್ಲಿ ರಕ್ತ ಪತ್ತೆಯಾಗಿದೆ. ಸ್ಥಳದಿಂದ ಪೇಪರ್ ಕಟರ್ ಮತ್ತು ಬೆಂಕಿಕಡ್ಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೃತನನ್ನು ವಜೀರಾಬಾದ್ ನಿವಾಸಿ ರಶೀದ್ ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಆ ವ್ಯಕ್ತಿ ರಶೀದ್ ಜೊತೆ ಕಾಣಿಸಿಕೊಂಡಿದ್ದಾನೆ. ನಂತರ, ಪೊಲೀಸರು ಮುನಿಶಿದ್ದೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಮುನಿಶಿದ್ಧೀನ್ ಮತ್ತು ರಶೀದ್ ಅವರು ಪ್ಲಂಬರ್ ಮತ್ತು ಎಲೆಕ್ಟ್ರಿಷಿಯನ್ ಆಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಮತ್ತು ನಿಕಟ ಸ್ನೇಹಿತರಾಗಿದ್ದರು. ಅವರು ಪರಸ್ಪರರ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮುನಿಶಿದ್ದೀನ್ ಹಾಗೂ ರಶೀದ್ ಪತ್ನಿ ನಡುವೆ ಪ್ರೇಮಾಂಕುರವಾಗಿದೆ. ರಶೀದ್ ತನ್ನ ಪತ್ನಿಗೆ ಮದ್ಯ ಸೇವಿಸಿ ಧಳಿಸುತ್ತಿದ್ದ. ಇದರಿಂದ ಮುನಿಶಿದ್ಧೀನ್ ಮತ್ತು ಮಹಿಳೆ ಆನತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 10-15 ದಿನಗಳಿಂದ ರಶೀದ್‌ನಿಂದ ತಪ್ಪಿಸಿಕೊಳ್ಳಲು ಆತನನ್ನು ಕೊಲೆ ಮಾಡುವಂತೆ ಮುನಿಶಿದ್ಧೀನ್ ಮೇಲೆ ಒತ್ತಡ ಹೇರುತ್ತಿದ್ದಳು. ಅವರ ಯೋಜನೆಯ ಪ್ರಕಾರ, ಮುನಿಶಿದ್ಧೀನ್ ರಶೀದ್‌ನನ್ನು ರಾಮ್ ಘಾಟ್‌ಗೆ ಕರೆದೊಯ್ದು ಅಲ್ಲಿ ಇಬ್ಬರು ಮದ್ಯ ಸೇವಿಸಿದ್ದಾರೆ. ಮುನಿಶಿದ್ಧೀನ್ ಕುಡಿದ ಸ್ಥಿತಿಯಲ್ಲಿ ರಶೀದ್‌ಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಕತ್ತು ಕೊಯ್ದು ದೇಹವನ್ನು ಸುಟ್ಟು ಹಾಕಿದ್ದಾನೆ. ಆರೋಪಿಗಳು ಸಾಕ್ಷ್ಯಗಳು ಮತ್ತು ಗುರುತನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಅವರು ಹೇಳಿದರು.