ತಮಿಳುನಾಡಿನ ಬಿಜೆಪಿ ಘಟಕದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ: ಖುಷ್ಬೂ ಸುಂದರ್

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ನಟಿ ಖುಷ್ಬೂ ಸುಂದರ್ ಅವರು ತಮಿಳುನಾಡಿನಲ್ಲಿ ತಮ್ಮ ಪಕ್ಷದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಭಾನುವಾರ ಹೇಳಿದ್ದಾರೆ.
ಖುಷ್ಬೂ ಸುಂದರ್
ಖುಷ್ಬೂ ಸುಂದರ್

ಕೊಯಮತ್ತೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ನಟಿ ಖುಷ್ಬೂ ಸುಂದರ್ ಅವರು ತಮಿಳುನಾಡಿನಲ್ಲಿ ತಮ್ಮ ಪಕ್ಷದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ಭಾನುವಾರ ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಘಟಕದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂಬ ನಟಿ-ರಾಜಕಾರಣಿ ಗಾಯತ್ರಿ ರಘುರಾಮ್ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಖುಷ್ಬೂ, 'ಎಲ್ಲಾ ಮಹಿಳೆಯರು ಪಕ್ಷವನ್ನು ತೊರೆದಿಲ್ಲ. ನಾನು ಕೂಡ ಪಕ್ಷದಲ್ಲಿದ್ದೇನೆ' ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಜೆಪಿಯಿಂದ ಅಮಾನತುಗೊಂಡಿದ್ದ ಗಾಯತ್ರಿ ರಘುರಾಮ್ ಅವರು ಜನವರಿ 3 ರಂದು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು ಮತ್ತು 'ನಿಜವಾದ ಕಾರ್ಯಕರ್ತರ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸುವುದಿಲ್ಲ ಎಂದು ತಮಿಳುನಾಡು ಬಿಜೆಪಿ ಘಟಕದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದರು. ಅಲ್ಲದೆ, ಪಕ್ಷ ತೊರೆಯುವ ನಿರ್ಧಾರಕ್ಕೆ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರನ್ನು ದೂಷಿಸಿದರು.

ಆದರೆ, ಪಕ್ಷವನ್ನು ತೊರೆದವರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಮತ್ತು ಅಂತಹ ವ್ಯಕ್ತಿಗಳು ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದು ಅಣ್ಣಾಮಲೈ ಶುಭ ಹಾರೈಸಿದರು.

ಡಿಎಂಕೆಯಲ್ಲಿ ಕೆಲವರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ ಮತ್ತು ಬಿಜೆಪಿ ತನ್ನ ಬೆಂಬಲಕ್ಕೆ ನಿಂತಿದೆ. ಅಣ್ಣಾಮಲೈ ಅವರು ಧೈರ್ಯಶಾಲಿ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಅವರು ನನ್ನ ಪರವಾಗಿ ಹೋರಾಡಿದರು ಎಂದು ಖುಷ್ಬೂ ಹೇಳಿದರು.

ವೆಲ್ಲೂರಿನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ರೆಕ್ಲಾ ರೇಸ್’ (ಎತ್ತಿನ ಬಂಡಿ ಓಟ) ಧ್ವಜಾರೋಹಣ ನೆರವೇರಿಸಲು ಆಗಮಿಸಿದ್ದ ನಟಿ, ಪೊಂಗಲ್ ತಮಿಳುನಾಡಿನ ಸಾಂಪ್ರದಾಯಿಕ ಹಬ್ಬವಾಗಿದ್ದು, ಎಲ್ಲ ಮನೆಗಳಲ್ಲಿ ಸಂತಸ ತರುತ್ತದೆ ಎಂದರು.

ಆದರೆ, ಡಿಎಂಕೆ ಸರ್ಕಾರ ನೀಡಿದ ಪೊಂಗಲ್ ಉಡುಗೊರೆ ನಾಚಿಕೆಗೇಡಿನ ಸಂಗತಿಯಾಗಿದ್ದು, ಕಬ್ಬು ಮತ್ತು 1,000 ರೂ.ಗಳನ್ನು ಭಿಕ್ಷೆಯಂತೆ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

'ತಮಿಳಗಂ' ಪದದ ಬಳಕೆಯ ಕುರಿತು ಮಾತನಾಡಿದ ಅವರು, 'ರಾಜ್ಯವನ್ನು ತಮಿಳಗಂ ಅಥವಾ ತಮಿಳುನಾಡು ಎಂದು ಕರೆಯುವುದು ತಪ್ಪಲ್ಲ. ನಾನು ಮುಂಬೈನಲ್ಲಿ ಹುಟ್ಟಿದ್ದರೂ, ನಾನು ತಮಿಳು ಮಹಿಳೆ ಮತ್ತು ಕಳೆದ 36 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ' ಎಂದು ಹೇಳಿದರು.

ಇದಕ್ಕೂ ಮುನ್ನ ಪೊಂಗಲ್ ತಯಾರಿಸಿ ‘ರೇಕ್ಲಾ ಬಂಡಿ’ಯಲ್ಲಿ ಸ್ವಲ್ಪ ದೂರ ಪ್ರಯಾಣ ಬೆಳೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com