
ಡಾ.ಮನ್ ಮೋಹನ್ ಸಿಂಗ್ ಅವರೊಂದಿಗೆ ರೆಹಮಾನ್ ರಹಿ ಇರುವ ಸಾಂದರ್ಭಿಕ ಚಿತ್ರ
ಶ್ರೀನಗರ: ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಸರಾಂತ ಕವಿ ಮತ್ತು ಪ್ರೊಫೆಸರ್ ರೆಹಮಾನ್ ರಹಿ ಸೋಮವಾರ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ನೌಶೇರಾ ಬಡಾವಣೆಯ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ರಹಿ ಕೊನೆಯುಸಿರೆಳೆದರು ಎಂದು ಅಧಿಕೃತ ಮೂಲಗಳು ಹೇಳಿವೆ.
ಮೇ 6, 1925ರಲ್ಲಿ ಜನಿಸಿದ ರಹಿ ಹಲವು ಕವಿತೆಗಳನ್ನು ಬರೆದಿದ್ದಾರೆ. ಇತರ ಭಾಷೆಗಳ ಹಲವು ಖ್ಯಾತ ಕವಿಗಳ ಕೃತಿಗಳನ್ನು ಕಾಶ್ಮೀರಿಗೆ ಭಾಷೆಗೆ ಅನುವಾದ ಮಾಡಿದ್ದಾರೆ.
ಕವನಗಳ ಸಂಕಲನ ನವ್ರೋಜ್ -ಐ-ಸಬಾಕ್ಕೆ 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ರಹಿ, 2007ರಲ್ಲಿ ದೇಶದ ಅತ್ಯುನ್ನತ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅವರ ಸಾಹಿತ್ಯದ ಕೆಲಸಕ್ಕಾಗಿ 2000ದಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.