ಕೆ ಜೆ ಯೇಸುದಾಸ್ 83ನೇ ಹುಟ್ಟುಹಬ್ಬ: ಆಪ್ತ ಸ್ನೇಹಿತ ಗೋವಿಂದಂಕುಟ್ಟಿ ಸಂಗೀತ ವಿದ್ವಾಂಸನ ಬಗ್ಗೆ ಹೇಳಿದ್ದೇನು?

ಕರ್ನಾಟಕ ಸಂಗೀತ ಲೋಕದ ಜೀವಂತ ದಂತಕಥೆ, ಹಿರಿಯ ಗಾಯಕ ಕೆ ಜೆ ಯೇಸುದಾಸ್ (K J Yesudas)ಅವರನ್ನು ಕೇರಳಿಗರು ಆರಾಧ್ಯ ದೈವದಂತೆ ಕಾಣುತ್ತಾರೆ. ಕಳೆದ 5 ದಶಕಗಳಲ್ಲಿ ಸಂಗೀತ ಲೋಕದಲ್ಲಿ ಅಚ್ಚಳಿಯದ ಸಾಧನೆಗೈದ ಅದ್ಭುತ ಗಾಯಕ ಯೇಸುದಾಸ್ ಅವರ ಜನ್ಮದಿನ ಇಂದು. 
ಕೆ ಜೆ ಯೇಸುದಾಸ್
ಕೆ ಜೆ ಯೇಸುದಾಸ್

ಕೊಚ್ಚಿ: ಕರ್ನಾಟಕ ಸಂಗೀತ ಲೋಕದ ಜೀವಂತ ದಂತಕಥೆ, ಹಿರಿಯ ಗಾಯಕ ಕೆ ಜೆ ಯೇಸುದಾಸ್ (K J Yesudas)ಅವರನ್ನು ಕೇರಳಿಗರು ಆರಾಧ್ಯ ದೈವದಂತೆ ಕಾಣುತ್ತಾರೆ. ಕಳೆದ 5 ದಶಕಗಳಲ್ಲಿ ಸಂಗೀತ ಲೋಕದಲ್ಲಿ ಅಚ್ಚಳಿಯದ ಸಾಧನೆಗೈದ ಅದ್ಭುತ ಗಾಯಕ ಯೇಸುದಾಸ್ ಅವರ ಜನ್ಮದಿನ ಇಂದು. 

ಕೊಲ್ಲೂರು ಮೂಕಾಂಬಿಕಾ ದೇವಿ ಮತ್ತು ಉಡುಪಿ ಶ್ರೀಕೃಷ್ಣನ ಪರಮ ಭಕ್ತರಾಗಿರುವ ಯೇಸುದಾಸ್ ತಮ್ಮ ಹುಟ್ಟುಹಬ್ಬ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿಕೊಂಡು ಬರುವ ವಾಡಿಕೆಯನ್ನು ದಶಕಗಳಿಂದ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಅವರಿಗೆ ಮೂಕಾಂಬಿಕೆ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಅವರು ಅಮೆರಿಕದ ಡಲ್ಲಾಸ್ ನ ತಮ್ಮ ನಿವಾಸದಲ್ಲಿದ್ದಾರೆ. 

ಆದರೆ ಅವರ ಸ್ನೇಹಿತರು ಬಿಡಬೇಕಲ್ಲ, ಅವರ ನಿಕಟವರ್ತಿ ಚೆರ್ತಾಲ ಗೋವಿಂದಂಕುಟ್ಟಿ ಇಂದು ಯೇಸುದಾಸ್ ಅವರ 83ನೇ ಹುಟ್ಟುಹಬ್ಬದ ಅಂಗವಾಗಿ ಹಲವು ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲಿದ್ದಾರೆ. 

ಯೇಸುದಾಸ್ ಅವರು ಸಂಗೀತವನ್ನೇ ಉಸಿರಾಗಿಸಿಕೊಂಡವರು. ಪ್ರತಿದಿನ ನನಗೆ ಕರೆ ಮಾಡಿ ಸಂಗೀತ ಬಗ್ಗೆಯೇ ಮಾತನಾಡುತ್ತಾರೆ, ಅವರು ರಾಗವೊಂದನ್ನು ಹಾಡಿ ನನಗೆ ಹಾಡಲು ಹೇಳುತ್ತಾರೆ. ಅಂತಹ ಅದ್ಭುತ ಗಾಯಕನ ಸ್ನೇಹಿತನಾಗಿರುವುದು ನನ್ನ ಪುಣ್ಯ ಎನ್ನುತ್ತಾರೆ ಚೆರ್ತಾಲ.

ಯೇಸುದಾಸ್ ಭೇಟಿ: ಗೋವಿಂದಂಕುಟ್ಟಿಯವರು ಸ್ವಾತಿ ತಿರುನಾಳ ಸಂಗೀತ ಕಾಲೇಜು ತಿರುವನಂತಪುರದಲ್ಲಿ 1956ರಲ್ಲಿ ಸಂಗೀತ ಕೋರ್ಸ್ ಗೆ ಸೇರ್ಪಡೆಯಾಗಿದ್ದರು. ತ್ರಿಪುನಿತುರದಲ್ಲಿ ಆರ್ ಎಲ್ ವಿ ಸಂಗೀತ ಅಕಾಡೆಮಿ ಆರಂಭವಾದಾಗ ಅಲ್ಲಿಗೆ ವರ್ಗಾವಣೆಗೊಂಡರು. ಅಲ್ಲಿ ಅವರು ಯೇಸುದಾಸ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು.

1960ರಲ್ಲಿ ಪದವಿ ಮುಗಿಸಿದ ನಂತರ ಯೇಸುದಾಸ್ ಅವರು ಸಂಗೀತವನ್ನು ವೃತ್ತಿಯಾಗಿ ಸ್ವೀಕರಿಸಿದರೆ ಗೋವಿಂದಂಕುಟ್ಟಿ ಶಿಕ್ಷಕ ವೃತ್ತಿಗೆ ಸೇರಿದರಂತೆ. ಆರ್ ಎಲ್ ವಿಯಲ್ಲಿ 7 ಪುರುಷರು, 15 ಮಂದಿ ಮಹಿಳೆಯರಿದ್ದರು. ಕೊನೆಗೆ ನಾನು ಮತ್ತು ಯೇಸುದಾಸ್ ಉಳಿದೆವು.

<strong>ಗೆಳೆಯ ಗೋವಿಂದಂಕುಟ್ಟಿ ಜೊತೆ ಕೆ ಜೆ ಯೇಸುದಾಸ್ </strong>
ಗೆಳೆಯ ಗೋವಿಂದಂಕುಟ್ಟಿ ಜೊತೆ ಕೆ ಜೆ ಯೇಸುದಾಸ್ 

ಸ್ನೇಹಿತನ ಕೀರ್ತಿಯನ್ನು ಲಾಭಕ್ಕೆ ಬಳಸಿಕೊಳ್ಳಲಿಲ್ಲ: ನಾನು ಯೇಸುದಾಸ್ ಗಿಂತ ಒಂದು ತಿಂಗಳು ದೊಡ್ಡವನು. ನನ್ನ 80ನೇ ವರ್ಷದ ಹುಟ್ಟುಹಬ್ಬಕ್ಕೆ 3 ವರ್ಷಗಳ ಹಿಂದೆ ಪುತಿಯಕಾವು ದೇವಸ್ಥಾನದ ಆಡಿಟೊರಿಯಂಗೆ ಬಂದಿದ್ದ. ನಾಡಿದ್ದು ಏಪ್ರಿಲ್ ಗೆ ಊರಿಗೆ ಬರುತ್ತಾನೆ, ನನ್ನ ಮಗಳ ಹೊಸ ಮನೆಗೆ ಭೇಟಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾನೆ ಎಂದು ಗೆಳೆಯನ ಬಗ್ಗೆ ಹೇಳಿಕೊಳ್ಳುತ್ತಾರೆ.

ಗೋವಿಂದಂಕುಟ್ಟಿಯವರು ಸ್ವತಃ ನಾಟಕಗಳು, ಬ್ಯಾಲೆಟ್, ಆಲ್ಬಂಗಳಿಗೆ ಗೀತ ರಚನೆ ಮಾಡಿದ್ದಾರೆ. ಯೇಸುದಾಸ್ ಮಕ್ಕಳಾದ ವಿಜಯ್ ಮತ್ತು ವಿಶಾಲ್ ಕರ್ನಾಟಕ ಸಂಗೀತ ಕಲಿಯುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಯೇಸುದಾಸ್ ಗೋವಿಂದನ್‌ಕುಟ್ಟಿ ಅವರನ್ನು ಶಿಕ್ಷಕರಾಗಿ ಆಯ್ಕೆ ಮಾಡಿದರಂತೆ

<strong>ಕೆ ಜೆ ಯೇಸುದಾಸ್ </strong>
ಕೆ ಜೆ ಯೇಸುದಾಸ್ 

“ವಿಜಯ್ ಮತ್ತು ವಿಶಾಲ್ ಅವರಿಗೆ ಕಲಿಸಲು ನಾನು ಮೂರು ವರ್ಷಗಳ ಕಾಲ ಚೆನ್ನೈನಲ್ಲಿರುವ ಯೇಸುದಾಸ್ ಅವರ ಮನೆಯಲ್ಲಿದ್ದೆ. ಅವನು ನನ್ನನ್ನು ಸಹೋದರನೆಂದು ಪರಿಗಣಿಸುತ್ತಾನೆ. ಅವರ ಪತ್ನಿ ಪ್ರಭಾ ನನ್ನನ್ನು ಕುಟುಂಬದ ಸದಸ್ಯೆಯಾಗಿ ಸ್ವೀಕರಿಸುತ್ತಾರೆ. ಆರ್‌ಎಲ್‌ವಿ ಮ್ಯೂಸಿಕ್ ಅಕಾಡೆಮಿಯಲ್ಲಿ ನಮ್ಮ ಸ್ನೇಹ ಪ್ರಾರಂಭವಾಯಿತು. ಅವರ ಖ್ಯಾತಿಯ ಲಾಭವನ್ನು ನಾನು ಎಂದಿಗೂ ತೆಗೆದುಕೊಂಡಿಲ್ಲ ಎನ್ನುತ್ತಾರೆ. 

ಗೋವಿಂದಂಕುಟ್ಟಿ ಅವರು ಇಂದು ಕೊಚ್ಚಿಯ ಅಜೀಜಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ಗಾಯಕನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲಿದ್ದು, ಅಲ್ಲಿ ಸಂಗೀತ ಆಲ್ಬಂ ಬಿಡುಗಡೆ ಮಾಡಲಾಗುತ್ತದೆ. ಯೇಸುದಾಸ್ ಮತ್ತು ಅವರ ಪತ್ನಿ ಡಲ್ಲಾಸ್‌ನಿಂದ ಆನ್‌ಲೈನ್‌ನಲ್ಲಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಉಣ್ಣಿ ಮೆನನ್, ಎಂಜಿ ಶ್ರೀಕುಮಾರ್, ಸುದೀಪ್ ಕುಮಾರ್ ಮತ್ತು ಯೇಸುದಾಸ್ ಅವರ ಪುತ್ರ ವಿಜಯ್ ಯೇಸುದಾಸ್ ಸೇರಿದಂತೆ ಸುಮಾರು 50 ಹಿನ್ನೆಲೆ ಗಾಯಕರು ಈ ಸಮಾರಂಭದಲ್ಲಿ ಸಂಗೀತ ನೀಡಲಿದ್ದಾರೆ.

ಯೇಸುದಾಸ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಸಾಹಿತಿ ಆರ್ ಕೆ ದಾಮೋದರನ್, “1977 ರಲ್ಲಿ ಅವರು ನನ್ನ “ರವಿವರ್ಮ ಚಿತ್ರತಿನ್...” ಹಾಡನ್ನು ಹಾಡಿದಾಗಿನಿಂದ ನನಗೆ ಪರಿಚಯವಿದೆ, ನಾನು ಭಕ್ತನಾಗಿರುವುದರಿಂದ, ಅವರು ತಮ್ಮ ಜನ್ಮದಿನದಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ನನ್ನನ್ನು ಆಹ್ವಾನಿಸುತ್ತಿದ್ದರು. 

ಕೆಲವು ವರ್ಷಗಳ ಹಿಂದೆ ಇಡೀ ದಿನ ದೇವಸ್ಥಾನದೊಳಗೆ ಕಳೆಯುವ ಅಪರೂಪದ ಅವಕಾಶ ಸಿಕ್ಕಿತ್ತು. ಚಂದ್ರಗ್ರಹಣವಿದ್ದ ಕಾರಣ ಇಡೀ ರಾತ್ರಿ ದೇವಸ್ಥಾನವನ್ನು ತೆರೆದಿಡಲಾಗಿತ್ತು. ಒಳಗೆ ಬಹಳ ಕಡಿಮೆ ಜನರಿದ್ದರು. ರಾತ್ರಿಯಿಡೀ ಧ್ಯಾನದಲ್ಲಿಯೇ ಕಳೆದರು. ಆಗ ನನಗೆ ಅವರ ಭಕ್ತಿಯ ಆಳ ಅರಿವಾಯಿತು. ಮುಂದಿನ ವರ್ಷ ಅವರು ‘ಶತಾಭಿಷೇಕ’ ಆಚರಿಸಲಿದ್ದಾರೆ. ಈ ಸಂದರ್ಭಕ್ಕಾಗಿ ನಾವು ಕುತೂಹಲದಿಂದ ಎದುರು ನೋಡುತ್ತಿದ್ದೇವೆ ಎಂದು ದಾಮೋದರನ್ ಹೇಳುತ್ತಾರೆ.‘

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com