ಎಲ್‌ಪಿಜಿ ಬಡವರ ಕೈಗೆಟಕುವಂತೆ ಮಾಡಿ: ಬಜೆಟ್‌ಗೂ ಮುನ್ನ ನಿರ್ಮಲಾ ಸೀತಾರಾಮನ್ ಗೆ ಸಿಟಿಜೆನ್ ಗ್ರೂಪ್ ಆಗ್ರಹ

ದೇಶದಾದ್ಯಂತ ಬಡ ಕುಟುಂಬಗಳಿಗೆ ಅಡುಗೆ ಅನಿಲ ಕೈಗೆಟುಕುವಂತೆ ಮಾಡಲು 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನಿಬಂಧನೆಗಳನ್ನು ವಿಧಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ನಾಗರಿಕ ಕ್ರಿಯಾ ಗುಂಪು ಬುಧವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಾದ್ಯಂತ ಬಡ ಕುಟುಂಬಗಳಿಗೆ ಅಡುಗೆ ಅನಿಲ ಕೈಗೆಟುಕುವಂತೆ ಮಾಡಲು 2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನಿಬಂಧನೆಗಳನ್ನು ವಿಧಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ನಾಗರಿಕ ಕ್ರಿಯಾ ಗುಂಪು ಬುಧವಾರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್, ಟಿಎಂಸಿ ಸಂಸದ ಸೌಗತ ರಾಯ್, ಡಿಎಂಕೆ ಸಂಸದ ಡಿ ರವಿಕುಮಾರ್, ನ್ಯಾಷನಲ್ ಕಾನ್ಫರೆನ್ಸ್ ಸಂಸದ ಫಾರೂಕ್ ಅಬ್ದುಲ್ಲಾ, ಎನ್‌ಸಿಪಿ ಸಂಸದ ವಂದನಾ ಚವಾಣ್ ಮತ್ತು ನ್ಯಾಯಮೂರ್ತಿ(ನಿವೃತ್ತ) ಅಂಜನಾ ಪ್ರಕಾಶ್ ಸೇರಿದಂತೆ 20ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ಈ ಪತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಗುಂಪು ಹೇಳಿಕೊಂಡಿದೆ.

"2016 ರಲ್ಲಿ ಪರಿಚಯಿಸಲಾದ ಪ್ರಧಾನಮಂತ್ರಿ ಉಜ್ವಲ ಯೋಜನೆ(PMUY) 8 ಕೋಟಿ ಕುಟುಂಬಗಳಿಗೆ ಸಬ್ಸಿಡಿ ಸಹಿತ ಎಲ್ ಪಿಸಿ ಸಂಪರ್ಕ ನೀಡಿದೆ. ಆದಾಗ್ಯೂ, ಸಬ್ಸಿಡಿಯು ಸಕಾಲಕ್ಕೆ ದೊರೆಯದೇ ಲಕ್ಷಾಂತರ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಎಲ್ ಪಿಜಿ ಸಿಲಿಂಡರ್ ಬೆಲೆ 1 ಸಾವಿರ ರೂಪಾಯಿಗಿಂತ ಹೆಚ್ಚಿದ್ದು, ಬಡ ಕುಟುಂಬಗಳು ಸಿಲಿಂಡರ್ ತುಂಬಿಸಲು ಸಾಧ್ಯವಾಗದೇ ಉರುವಲು ಮತ್ತು ಸಗಣಿಗಳಂತಹ ಅಶುದ್ಧ ಇಂಧನಗಳ ಮೇಲೆ ಅವಲಂಬಿತವಾಗಿವೆ. ಇದು ಆರೋಗ್ಯದ ಗಂಭೀರವಾದ ಪರಿಣಾಮ ಬೀರುತ್ತದೆ ಎಂದು ಗುಂಪು ಪತ್ರದಲ್ಲಿ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com