ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ: ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಈ ಅಸ್ಥಿರತೆಯ ಸ್ಥಿತಿ ಎಷ್ಟು ಕಾಲ ಇರುತ್ತದೆ ಎಂಬುದನ್ನು ಊಹಿಸುವುದು ಕಷ್ಟಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
Published: 12th January 2023 12:09 PM | Last Updated: 12th January 2023 12:26 PM | A+A A-

ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ.
ನವದೆಹಲಿ: ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಈ ಅಸ್ಥಿರತೆಯ ಸ್ಥಿತಿ ಎಷ್ಟು ಕಾಲ ಇರುತ್ತದೆ ಎಂಬುದನ್ನು ಊಹಿಸುವುದು ಕಷ್ಟಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ವಾಯ್ಸ್ ಆಫ್ ಗ್ಲೋಬಲ್ ಸೌತ್ ವರ್ಚುವಲ್ ಶೃಂಗಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಮಾತನಾಡಿದ ಮೋದಿಯವರು, ಸಂಘರ್ಷ, ಯುದ್ಧ ಮತ್ತು ಭಯೋತ್ಪಾದನೆಯಿಂದ ಉದ್ಭವಿಸುವ ವಿವಿಧ ಜಾಗತಿಕ ಸವಾಲುಗಳನ್ನು ಉಲ್ಲೇಖಿಸಿದರು.
ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬೆಲೆ, ಕೋವಿಡ್-19ರ ಆರ್ಥಿಕ ಪರಿಣಾಮ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ನೈಸರ್ಗಿಕ ವಿಕೋಪಗಳ ಬಗ್ಗೆ ಮೋದಿಯವರು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸವ: ಹುಬ್ಬಳ್ಳಿಗಿಂದು ಪ್ರಧಾನಿ ಮೋದಿ, ಎಲ್ಲೆಡೆ ಬಿಗಿ ಭದ್ರತೆ, ಸಂಚಾರ ಮಾರ್ಗ ಬದಲಾವಣೆ
"ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ. "ಅಸ್ಥಿರತೆಯ ಸ್ಥಿತಿ" ಎಷ್ಟು ಕಾಲ ಇರುತ್ತದೆ ಎಂಬುದನ್ನು ಊಹಿಸುವುದು ಕಷ್ಟ ಸಾಧ್ಯ ಎಂದು ವಿವಿಧ ಅಭಿವೃದ್ಧಿಶೀಲ ರಾಷ್ಟ್ರಗಳ ಹಲವಾರು ನಾಯಕರ ಉಪಸ್ಥಿತಿಯಲ್ಲಿ ಹೇಳಿದರು
ಭಾರತವು ಯಾವಾಗಲೂ ತನ್ನ ಅಭಿವೃದ್ಧಿಯ ಅನುಭವವನ್ನು "ಜಾಗತಿಕ ದಕ್ಷಿಣದ ಸಹೋದರರೊಂದಿಗೆ" ಹಂಚಿಕೊಂಡಿದೆ. ಭಾರತವು ಈ ವರ್ಷ ತನ್ನ ಜಿ 20 ಅಧ್ಯಕ್ಷತೆಯನ್ನು ಪ್ರಾರಂಭಿಸಿದ್ದು, ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಜಾಗತಿಕ ದಕ್ಷಿಣದ ರಾಷ್ಟ್ರಗಳನ್ನು ಒಟ್ಟುಗೂಡಿಸಲು ಭಾರತವು ಎರಡು ದಿನಗಳ ಶೃಂಗಸಭೆಯನ್ನು ಆಯೋಜಿಸುತ್ತಿದೆ ಮತ್ತು ಉಕ್ರೇನ್ ಸಂಘರ್ಷದಿಂದ ಪ್ರಚೋದಿಸಲ್ಪಟ್ಟ ಆಹಾರ ಮತ್ತು ಇಂಧನ ಭದ್ರತೆ ಸೇರಿದಂತೆ ವಿವಿಧ ಜಾಗತಿಕ ಸವಾಲುಗಳಿಗೆ ಸಂಬಂಧಿಸಿದ ಅವರ ಸಾಮಾನ್ಯ ಕಾಳಜಿಗಳನ್ನು ಹಂಚಿಕೊಳ್ಳಲು ಅವರಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ ಎಂದರು.
ಶೃಂಗಸಭೆಯು ಹತ್ತು ಸಭೆಗಳನ್ನು ಯೋಜಿಸಿದ್ದು ಅದರಲ್ಲಿ ನಾಲ್ಕು ಸಭೆಗಳು ಗುರುವಾರ ನಡೆಯಲಿದೆ. ಆರು ಸಭೆಗಳು ಶುಕ್ರವಾರ ನಡೆಯಲಿವೆ. ಪ್ರತಿ ಅಧಿವೇಶನದಲ್ಲಿ 10-20 ದೇಶಗಳ ನಾಯಕರು ಮತ್ತು ಸಚಿವರುಗಳು ಭಾಗವಹಿಸುವ ನಿರೀಕ್ಷೆಯಿದೆ.