ಕೇರಳ: ಇನ್ಮುಂದೆ ಶಾಲೆಗಳಲ್ಲಿ ಶಿಕ್ಷಕರನ್ನು 'ಸರ್, ಮೇಡಂ ಅನ್ನುವಂತಿಲ್ಲ! ಮಕ್ಕಳ ಹಕ್ಕುಗಳ ಆಯೋಗ ಸೂಚನೆ

ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸರ್, ಮೇಡಂ ಅನ್ನುವಂತಿಲ್ಲ. ಬದಲಿಗೆ ಟೀಚರ್ ಎಂದು ಕರೆಯುವಂತೆ ಅಲ್ಲಿನ ಮಕ್ಕಳ ಹಕ್ಕುಗಳ ಆಯೋಗ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಸರ್, ಮೇಡಂ ಅನ್ನುವಂತಿಲ್ಲ. ಬದಲಿಗೆ ಟೀಚರ್ ಎಂದು ಕರೆಯುವಂತೆ ಅಲ್ಲಿನ ಮಕ್ಕಳ ಹಕ್ಕುಗಳ ಆಯೋಗ ಸೂಚನೆ ನೀಡಿದೆ.

ಸರ್, ಮೇಡಂ ಅನ್ನುವುದಕ್ಕಿಂತ ಟೀಚರ್ ಪದ ಲಿಂಗ ತಟಸ್ಥವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ , ಶಿಕ್ಷಕರು ಕೂಡಾ ಈ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ನಿರ್ದೇಶಿಸಿದೆ.

ಕೇರಳ ರಾಜ್ಯ ಮಕ್ಕಳ ಆಯೋಗದ ಮುಖ್ಯಸ್ಥರಾದ ಕೆ. ವಿ. ಮನೋಜ್ ಕುಮಾರ್ ಹಾಗೂ ಸದಸ್ಯ ಸಿ. ವಿಜಯ್ ಕುಮಾರ್ , ಶಿಕ್ಷಣ ಇಲಾಖೆಗೆ ಈ ನಿರ್ದೇಶನ ನೀಡಿದ್ದಾರೆ. ಸಮಾನತೆ ಹಾಗೂ ಶಿಕ್ಷಕರೊಂದಿಗೆ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com