ಸಂಸದ ಸಂತೋಖ್ ಸಿಂಗ್ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಲು 24 ಗಂಟೆಗಳ ಕಾಲ ಭಾರತ್ ಜೋಡೋ ಯಾತ್ರೆ ಸ್ಥಗಿತ 

 ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ಜಲಂಧರ್ ಕಾಂಗ್ರೆಸ್ ಸಂಸದ ಸಂತೋಖ್​​​​​ ಸಿಂಗ್(77)​ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. 
ರಾಹುಲ್ ಗಾಂಧಿ ಮತ್ತು ಸಂತೋಖ್ ಸಿಂಗ್ ಚೌಧರಿ
ರಾಹುಲ್ ಗಾಂಧಿ ಮತ್ತು ಸಂತೋಖ್ ಸಿಂಗ್ ಚೌಧರಿ

ಪಂಜಾಬ್: ಭಾರತ್​ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ಜಲಂಧರ್ ಕಾಂಗ್ರೆಸ್ ಸಂಸದ ಸಂತೋಖ್​​​​​ ಸಿಂಗ್(77)​ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. 

ಮೃತ ಸಂಸದನಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷ ತಿಳಿಸಿದೆ.
 
ಜ.15 ರಂದು ಜಲಂಧರ್ ನಲ್ಲಿ ನಡೆಯಬೇಕಿದ್ದ ಪತ್ರಿಕಾಗೋಷ್ಠಿಯನ್ನೂ ರಾಹುಲ್ ಗಾಂಧಿ ಮುಂದೂಡಿದ್ದಾರೆ. ಪತ್ರಿಕಾಗೋಷ್ಠಿ ಜಲಂಧರ್ ಬದಲು ಜ.17 ರಂದು ಹೋಶಿಯಾರ್ ಪುರದಲ್ಲಿ ನಡೆಯಲಿದೆ.

 
ನಾಳೆ ಮಧ್ಯಾಹ್ನ ಜಲಂಧರ್ ನ ಖಾಲ್ಸಾ ಕಾಲೇಜ್ ಮೈದಾನದಿಂದ ಪುನಾರಂಭಗೊಳ್ಳಲಿದೆ ಎಂದು ಎಐಸಿಸಿ ಪ್ರಧಾನ ಕಾರಯ್ದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. 

ಭಾರತ್​ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಹೃದಯಾಘಾತವಾಗಿ ಸಂತೋಖ್​ ಸಿಂಗ್ ಅಸ್ವಸ್ಥರಾಗಿದ್ದರು. ಈ ವೇಳೆ ಅವರನ್ನು​ ಲೂದಿಯಾನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಸಂಸದ ಸಂತೋಖ್​​​​​​​ ಸಿಂಗ್ ಚೌಧರಿ ಸಾವನ್ನಪ್ಪಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com