ಮಾಧ್ಯಮ ಸಂಸ್ಥೆಗಳ ಮೇಲೆ ಬಿಜೆಪಿ ಸರ್ಕಾರ ಯಾವುದೇ ನಿಷೇಧ ಹೇರಿಲ್ಲ: ರಾಜನಾಥ್ ಸಿಂಗ್

ಬಿಜೆಪಿ ಸರ್ಕಾರ ಮಾಧ್ಯಮ ಸಂಸ್ಥೆಗಳ ಮೇಲೆ ಯಾವುದೇ ನಿಷೇಧ ವಿಧಿಸಿಲ್ಲ  ಮತ್ತು ಯಾರೊಬ್ಬರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಡಿತಗೊಳಿಸಿಲ್ಲ  ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ  ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ನವದೆಹಲಿ: ಬಿಜೆಪಿ ಸರ್ಕಾರ ಮಾಧ್ಯಮ ಸಂಸ್ಥೆಗಳ ಮೇಲೆ ಯಾವುದೇ ನಿಷೇಧ ವಿಧಿಸಿಲ್ಲ  ಮತ್ತು ಯಾರೊಬ್ಬರ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಡಿತಗೊಳಿಸಿಲ್ಲ  ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ  ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಆರೋಪ ಕುರಿತಂತೆ ಮಾತನಾಡಿದ ರಾಜನಾಥ್ ಸಿಂಗ್, 1951 ರಲ್ಲಿ 19 ನೇ ವಿಧಿಯ ತಿದ್ದುಪಡಿಯನ್ನು ಉಲ್ಲೇಖಿಸಿದ್ದು, ಕಾಂಗ್ರೆಸ್ ಸರ್ಕಾರ ವಾಕ್ ಸ್ವಾತಂತ್ರ್ಯ ತಡೆಯಲು ಸಂವಿಧಾನ ತಿದ್ದುಪಡಿ ಮಾಡಿದ್ದರೂ ಬಿಜೆಪಿ ಸರ್ಕಾರ ಆ ರೀತಿ ಮಾಡಿಲ್ಲ ಎಂದರು. 

ಆರ್‌ಎಸ್‌ಎಸ್ ಸಂಬಂಧಿತ ವಾರಪತ್ರಿಕೆ "ಪಾಂಚಜನ್ಯ" ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಸಿಂಗ್, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೇಶದಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಮಾಧ್ಯಮ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸುವವರು ಅದು ಅಟಲ್‌ಜಿ,ಅಥವಾ ಮೋದಿಜಿಯವರ ಸರ್ಕಾರವಾಗಲಿ ಯಾವುದೇ ಮಾಧ್ಯಮ ಸಂಸ್ಥೆಗೆ ಯಾವುದೇ ನಿಷೇಧ ಹೇರಿಲ್ಲ, ಯಾರೊಬ್ಬರ ಅಭಿವ್ಯಕ್ತಿ ಸ್ವಾತಂತ್ರವನ್ನು  ಮೊಟಕುಗೊಳಿಸಿಲ್ಲ ಎಂಬುದನ್ನು ಮರೆತುಬಿಟ್ಟಿದ್ದಾರೆ ಎಂದರು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ಹಳೆಯ ಪಕ್ಷದ ಸಂಪೂರ್ಣ ಇತಿಹಾಸವು ಎಲ್ಲಾ ರೀತಿಯ ಸ್ವಾತಂತ್ರ್ಯಗಳ ಉಲ್ಲಂಘನೆಯ ಘಟನೆಗಳಿಂದ ತುಂಬಿದೆ ಎಂದು ಹೇಳಿದರು. "ಕಾಂಗ್ರೆಸ್ ಸರ್ಕಾರವು ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಗಾಜಿನ ಮನೆಗಳಲ್ಲಿ ವಾಸಿಸುವವರು ಇತರರ ಮೇಲೆ ಕಲ್ಲು ಎಸೆಯಬಾರದು ಎಂದು ಅವರು ಹೇಳಿದರು.

ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ ಮತ್ತು ಅದರ ಸ್ವಾತಂತ್ರ್ಯವು ಬಲವಾದ  ಪ್ರಜಾಪ್ರಭುತ್ವಕ್ಕೆ ಬಹಳ ಮುಖ್ಯವಾಗಿದೆ ಎಂದು ಸಿಂಗ್ ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com