ದೆಹಲಿ: ಸಾಕು ನಾಯಿ ಮಲವಿಸರ್ಜನೆ ವಿಚಾರಕ್ಕೆ ಜಗಳ; ಟಾಯ್ಲೆಟ್ ಕ್ಲೀನರ್‌ನಿಂದ ವ್ಯಕ್ತಿ ಮೇಲೆ ಹಲ್ಲೆ, ಇಬ್ಬರ ಬಂಧನ
ನಾಯಿಯೊಂದು ಈ ಪ್ರದೇಶದಲ್ಲಿ ಮಲವಿಸರ್ಜನೆ ಮಾಡುವ ವಿಚಾರದಲ್ಲಿ ನಡೆದ ಜಗಳದಲ್ಲಿ ದೆಹಲಿಯ ಉತ್ತಮ್ ನಗರದ ನಿವಾಸಿಯೊಬ್ಬರು ಸಾಕುನಾಯಿ ಮಾಲೀಕರ ಮೇಲೆ ಟಾಯ್ಲೆಟ್ ಕ್ಲೀನರ್ ಮೂಲಕ ಹಲ್ಲೆ ನಡೆಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Published: 15th January 2023 11:57 AM | Last Updated: 15th January 2023 11:57 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ನಾಯಿಯೊಂದು ಈ ಪ್ರದೇಶದಲ್ಲಿ ಮಲವಿಸರ್ಜನೆ ಮಾಡುವ ವಿಚಾರದಲ್ಲಿ ನಡೆದ ಜಗಳದಲ್ಲಿ ದೆಹಲಿಯ ಉತ್ತಮ್ ನಗರದ ನಿವಾಸಿಯೊಬ್ಬರು ಸಾಕುನಾಯಿ ಮಾಲೀಕರ ಮೇಲೆ ಟಾಯ್ಲೆಟ್ ಕ್ಲೀನರ್ ಮೂಲಕ ಹಲ್ಲೆ ನಡೆಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಸಂತ್ರಸ್ಥರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ, ವ್ಯಕ್ತಿಯೊಬ್ಬರ ಮೇಲೆ ಕೆಲವು ಆ್ಯಸಿಡ್ ರೀತಿಯ ಪದಾರ್ಥಗಳನ್ನು ಎಸೆಯಲಾಗಿದೆ ಎಂದು ಉತ್ತಮ್ ನಗರ ಪೊಲೀಸ್ ಠಾಣೆಗೆ ಮಾಹಿತಿ ಬಂದ ಬಳಿಕ ಸ್ಥಳಕ್ಕೆ ಧಾವಿಸಿತು.
ತಮ್ಮ ಮನೆಯ ಮುಂಭಾಗದ ಜಾಗದಲ್ಲಿ ಪ್ರಾಣಿ ಮಲವಿಸರ್ಜನೆ ಮಾಡುತ್ತಿದೆ ಎಂದು ಆರೋಪಿಸಿ ಸ್ಥಳೀಯ ಮನೆಯೊಂದರ ಮಾಲೀಕರು ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಂದಿಗೆ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಜಗಳ ವಿಕೋಪಕ್ಕೆ ತಿರುಗಿ, ವ್ಯಕ್ತಿಯ ಮೇಲೆ ಟಾಯ್ಲೆಟ್ ಕ್ಲೀನರ್ ಅನ್ನು ಎಸೆದಿದ್ದಾರೆ. ಆರೋಪಿಯ ಮನೆಯಿಂದ ಟಾಯ್ಲೆಟ್ ಕ್ಲೀನರ್ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ವೈದ್ಯಕೀಯ ಪರೀಕ್ಷೆಯ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.