ಹರಿಯಾಣ: ಪೊಲೀಸ್ ಠಾಣೆಯಲ್ಲಿ ಆರೋಪಿಗೆ ಚಹಾ ಸೇವೆ, ಇಬ್ಬರು ಪೊಲೀಸರ ಅಮಾನತು

ವಂಚನೆಯ ಆರೋಪಿಗೆ ಟೀ ಪೂರೈಸಿದ ವಿಡಿಯೋ ವೈರಲ್ ಆದ ನಂತರ ಇಬ್ಬರು ಪೊಲೀಸರನ್ನು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಸೇವೆಯಿಂದ ಅಮಾನತು ಪಡಿಸಿದ್ದಾರೆ. ಕೈಥಲ್ ಜಿಲ್ಲೆಯ ಪುಂದ್ರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ದೂರುದಾರ ಮಹಿಳೆಯೊಬ್ಬರು ವಿಡಿಯೋ ತೋರಿಸಿದ ಕೂಡಲೇ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುವಂತೆ ಗೃಹ ಸಚಿವರು ಆದೇಶಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ವಂಚನೆಯ ಆರೋಪಿಗೆ ಟೀ ಪೂರೈಸಿದ ವಿಡಿಯೋ ವೈರಲ್ ಆದ ನಂತರ ಇಬ್ಬರು ಪೊಲೀಸರನ್ನು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಸೇವೆಯಿಂದ ಅಮಾನತು ಪಡಿಸಿದ್ದಾರೆ. ಕೈಥಲ್ ಜಿಲ್ಲೆಯ ಪುಂದ್ರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ದೂರುದಾರ ಮಹಿಳೆಯೊಬ್ಬರು ವಿಡಿಯೋ ತೋರಿಸಿದ ಕೂಡಲೇ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುವಂತೆ ಗೃಹ ಸಚಿವರು ಆದೇಶಿಸಿದ್ದಾರೆ. 

ಅಂಬಲಾದಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸುತ್ತಿದ್ದ ಸಚಿವರು, ಕೈಥಲ್ ಎಸ್ ಪಿಯನ್ನು ಫೋನ್ ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.  ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಚಹಾ ಪೂರೈಸಲಾಗುತ್ತಿದೆ. ಕ್ರಿಮಿನಲ್ ಗಳು ಪೊಲೀಸ್ ಠಾಣೆಯಲ್ಲಿ ಠಿಕಾಣಿ ಹೂಡಿದ್ದಾರೆ. ಪೊಲೀಸ್ ಠಾಣೆ ಬಂದ್ ಮಾಡುತ್ತೀನಿ? ಹೇಗೆ ಇದು ಸಂಭವಿಸಿತು. ಗೂಂಡಾಗಳು ರಾಜ್ಯವನ್ನು ಆಳಬೇಕಾ?ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

25 ಲಕ್ಷ ರೂ. ವಂಚನೆಯ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ದೂರುದಾರ ಮಹಿಳೆ ಸಚಿವರಿಗೆ ಹೇಳಿರುವುದಾಗಿ ವರದಿಯಾಗಿದೆ. ಆರೋಪಿ ಮುಕ್ತವಾಗಿ ಓಡಾಡುತ್ತಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ತದನಂತರ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಮಹಾನಿರ್ದೇಶಕ ಪಿಕೆ ಅಗರ್ ವಾಲ್ ಗೃಹ ಸಚಿವರಿಗೆ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಆಂಬ್ಯುಲೆನ್ಸ್ ಚಾಲಕರಿಂದ ಲಂಚಕ್ಕೆ ಒತ್ತಾಯ ಆರೋಪದ ಮೇರೆಗೆ ಪಾಣಿಪತ್ ನಲ್ಲಿ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವಂತೆ ಗೃಹ ಸಚಿವರು ನಿರ್ದೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com