ಸಿಆರ್ ಪಿಎಫ್ ಸಿಬ್ಬಂದಿ ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡಬೇಕು, ಮಾಡಬಾರದು: ಮಾರ್ಗಸೂಚಿ ಬಿಡುಗಡೆ
ದೇಶದ ಅತಿದೊಡ್ಡ ಅರೆಸೇನಾ ಪಡೆ ಸಿಆರ್‌ಪಿಎಫ್ ತನ್ನ ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಏನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ವಿವಾದಾತ್ಮಕ ಅಥವಾ ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸದಂತೆ ಕೇಳಿಕೊಂಡಿದೆ.
Published: 19th January 2023 08:53 PM | Last Updated: 20th January 2023 01:46 PM | A+A A-

ಸಿಆರ್ ಪಿಎಫ್ ಯೋಧರ ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ ಅತಿದೊಡ್ಡ ಅರೆಸೇನಾ ಪಡೆ ಸಿಆರ್‌ಪಿಎಫ್ ತನ್ನ ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಏನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ವಿವಾದಾತ್ಮಕ ಅಥವಾ ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸದಂತೆ ಕೇಳಿಕೊಂಡಿದೆ.
ಕಳೆದ ವಾರ ದೆಹಲಿಯ ಸೇನಾ ಕೇಂದ್ರ ಕಚೇರಿಯಿಂದ ಎರಡು ಪುಟಗಳ ಸೂಚನೆ ನೀಡಲಾಗಿದೆ. ಸಿಆರ್ ಪಿಎಸ್ ಸಿಬ್ಬಂದಿ ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿರುವುದು ಗಮನಕ್ಕೆ ಬಂದ ನಂತರ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಸೈನಿಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸಮಸ್ಯೆ ಹೇಳಿಕೊಳ್ಳುವುದು ನಿಯಮಗಳ ಉಲ್ಲಂಘನೆಯಾಗಲಿದ್ದು, ಶಿಸ್ತು ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ. ಸೈಬರ್ ಬೆದರಿಕೆ ಮತ್ತು ಕಿರುಕುಳ" ವಿರುದ್ಧ ಸಿಬ್ಬಂದಿಗೆ ಅರಿವು ಮೂಡಿಸಲು ಹೊಸ ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಸೂಕ್ಷ್ಮ ಸಚಿವಾಲಯ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಯೋಜಿಸಲಾಗಿರುವ ಕೆಲಸ ಹಾಗೂ ಕೆಲಸದ ಸ್ವರೂಪ ಬಹಿರಂಗಪಡಿಸದಿರುವುದು ಸೇರಿದಂತೆ ಯಾವುದನ್ನು ಮಾಡಬಾರದು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸರ್ಕಾರದ ಅಥವಾ ತಮ್ಮ ಖ್ಯಾತಿಗೆ ಧಕ್ಕೆ ತರುವಂತಹ ಯಾವುದನ್ನೂ ಮಾಡದಂತೆ, ರಾಜಕೀಯ/ಧಾರ್ಮಿಕ ಹೇಳಿಕೆಗಳನ್ನು ನೀಡದಂತೆ ವಿವಾದಾತ್ಮಕ, ಸೂಕ್ಷ್ಮ ಅಥವಾ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸದಂತೆ ಸೂಚಿಸಲಾಗಿದೆ.