ದೂರು ದಾಖಲಾದ 32 ವರ್ಷಗಳ ಬಳಿಕ ತೀರ್ಪು: ಕಲಬೆರಕೆ ಹಾಲು ಮಾರಾಟ ಮಾಡಿದ್ದ ವ್ಯಕ್ತಿಗೆ 6 ತಿಂಗಳ ಜೈಲು ಶಿಕ್ಷೆ!
ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಅಚ್ಚರಿ ವಿಷಯವೆಂದರೆ ದೂರು ದಾಖಲಾದ 32 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ.
Published: 20th January 2023 03:13 PM | Last Updated: 20th January 2023 03:15 PM | A+A A-

ಸಂಗ್ರಹ ಚಿತ್ರ
ಮುಜಫರ್‌ನಗರ: ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನು ಅಚ್ಚರಿ ವಿಷಯವೆಂದರೆ ದೂರು ದಾಖಲಾದ 32 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಕುಮಾರ್ ಅವರು ಆರೋಪಿ ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ಅವರನ್ನು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ 5,000 ರೂ. ದಂಡ ವಿಧಿಸಿದೆ.
ಹರ್ಬೀರ್ ಸಿಂಗ್ ಕಲಬೆರಕೆ ಹಾಲು ಮಾರಾಟ ಮಾಡುತ್ತಿರುವುದು ಸಾಬೀತಾಗಿತ್ತು ಎಂದು ಪ್ರಾಸಿಕ್ಯೂಷನ್ ಅಧಿಕಾರಿ ರಾಮಾವತಾರ್ ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಜಿಯಾಬಾದ್: ಚಪಾತಿಗೆ ಉಗುಳಿ ಅಡುಗೆ ತಯಾರಿ ವಿಡಿಯೋ ವೈರಲ್; ಮುಸ್ಲಿಂ ವ್ಯಕ್ತಿ ಬಂಧನ
ಹರ್ಬೀರ್ ಸಿಂಗ್ ಮಾರಾಟ ಮಾಡಿದ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಕಲಬೆರಕೆ ಕಂಡುಬಂದಿತ್ತು ಎಂದು ಪ್ರಾಸಿಕ್ಯೂಷನ್ ಅಧಿಕಾರಿ ತಿಳಿಸಿದ್ದಾರೆ.
ಆಹಾರ ನಿರೀಕ್ಷಕ ಸುರೇಶ್ ಚಂದ್ ಅವರು ಹಾಲು ಮಾರಾಟಗಾರ ಹರ್ಬೀರ್ ಸಿಂಗ್ ವಿರುದ್ಧ 1990ರ ಏಪ್ರಿಲ್ 21 ರಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು ಎಂದು ರಾಮಾವತಾರ್ ಸಿಂಗ್ ಹೇಳಿದರು.